ಅತ್ಯುತ್ತಮ ಆಸ್ಪತ್ರೆಗೆ ತುರ್ತು ಚಿಕಿತ್ಸೆ ಕೊಡೋರು ಯಾರು?

ಶುಕ್ರವಾರ, 2 ಆಗಸ್ಟ್ 2019 (15:34 IST)
ಅದೊಂದು ಹೆಸರಿಗೆ ಮಾತ್ರ ಜಿಲ್ಲೆಯ ಬೃಹತ್ ಸರ್ಕಾರಿ ಆಸ್ಪತ್ರೆ. ಆದ್ರೆ ಅಲ್ಲಿ ಯಂತ್ರೋಪಕರಣಗಳಿದ್ರೂ ತಜ್ಞ ವೈದ್ಯರಿಲ್ಲ. ವೈದ್ಯರಿದ್ರೂ ಯಂತ್ರೋಪಕರಣಗಳು ಕೆಲಸ ಮಾಡಲ್ಲ. ಹೀಗಾಗಿ ರೋಗಿಗಳು ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗಲಾರದೇ ಪರದಾಡುವಂತಾಗಿದೆ.  

ಒಂದಲ್ಲ ಒಂದು ರೀತಿಯಲ್ಲಿ ಸದಾ ಸುದ್ದಿಯಲ್ಲಿರೋ ಸರ್ಕಾರಿ ಆಸ್ಪತ್ರೆಯೇ  ಚಿತ್ರದುರ್ಗ ಜಿಲ್ಲಾಸ್ಪತ್ರೆ. ಇಲ್ಲಿ ಸುಸಜ್ಜಿತ ಕೊಠಡಿಗಳಿವೆ, ಆರು ಸಾವಿರ ಬೆಡ್‍ಗಳ ವ್ಯವಸ್ಥೆ ಇದೆ. ಎಲ್ಲಾ ರೋಗಿಗಳಿಗೂ ಸೂಕ್ತ ಚಿಕಿತ್ಸೆ ನೀಡುವ ಸೌಲಭ್ಯವಿದೆ. ಅಂತ ಹೇಳಿ, 2010ರಲ್ಲಿ ರಾಜ್ಯದಲ್ಲಿಯೇ ಅತ್ಯುತ್ತಮ ಆಸ್ಪತ್ರೆ ಅಂತ ಪ್ರಶಸ್ತಿ ಗಳಿಸಿದೆ.

ಆದ್ರೆ  ಈ ಆಸ್ಪತ್ರೆಯ ಅಸಲಿ ಸತ್ಯ ಇದಲ್ಲ. ಯಾಕಂದ್ರೆ  ಈ ಆಸ್ಪತ್ರೆ ನೋಡೋದಕ್ಕೆ ಮಾತ್ರ ದೊಡ್ಡದಷ್ಟೇ. ಆದ್ರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬದುಕಿದವರೇ ವಿರಳ. ಯಾಕಂದ್ರೆ, ವೈದ್ಯರು ಚಿಕಿತ್ಸೆ ನೀಡಲು ಅಗತ್ಯವಿರೋ ಮೂಲಭೂತ ಸೌಲಭ್ಯಗಳೇ ಇಲ್ಲಿಲ್ಲ. ಇನ್ನು ಉಸಿರಾಟದ ತೊಂದರೆಯಿಂದ ಬರುವ ರೋಗಿಗಳಿಗೆ ತುರ್ತು ಚಿಕಿತ್ಸೆ ನೀಡಲು ಇರುವ ವೆಂಟಿಲೇಟರ್‍ಗಳು ಒಂದೂ  ಕೆಲಸ ಮಾಡಲ್ಲ.

ಅಲ್ದೇ  ಯಾವ್ದೇ ಸೀರಿಯಸ್ ಪೇಷೆಂಟ್ ಬಂದ್ರೂ ಸಹ ರೋಗಿಗಳನ್ನು ದಾವಣಗೆರೆ ಆಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ರೆಫರ್ ಮಾಡೋದು ಇಲ್ಲಿನ ವೈದ್ಯರ ಕಾಯಕವಾಗಿದೆ ಅನ್ನೋದು ಜನರ ಆರೋಪವಾಗಿದೆ.  


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ