7 ವರ್ಷದ ಬಾಲಕನ ಬಾಯಿಂದ 526 ಹಲ್ಲುಗಳನ್ನು ಹೊರತೆಗೆದ ವೈದ್ಯರು

ಶುಕ್ರವಾರ, 2 ಆಗಸ್ಟ್ 2019 (09:28 IST)
ಚೆನ್ನೈ : ವೈದ್ಯರು 7 ವರ್ಷದ ಬಾಲಕನ ಬಾಯಿಂದ 526 ಹಲ್ಲುಗಳನ್ನು ಹೊರತೆಗೆದ ವಿಚಿತ್ರವಾದ ಘಟನೆ ಚೆನ್ನೈನ ಸವಿತಾ ದಂತ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದಿದೆ.



‘ಕಾಂಪೌಂಡ್ ಕಾಂಪೋಸಿಟ್ ಒಂಡೊಂಟೊಮಾ’ ಎಂಬ ಅಪರೂಪದ ಸಮಸ್ಯೆಯಿಂದ ಬಳಲುತ್ತಿರುವ ಈ ಬಾಲಕ ಕೆಳಗಿನ ಬಲದವಡೆಯಲ್ಲಿ ಊತ ಕಂಡುಬಂದ ಕಾರಣ ಆಸ್ಪತ್ರೆಗೆ ಕರೆತರಲಾಯಿತು. ಮಗುವಿಗೆ 3 ವರ್ಷವಿರುವಾಗ ಅದಕ್ಕೆ ಈ ಊತ ಕಾಣಿಸಿಕೊಂಡಿದ್ದು, ಪೋಷಕರು ಈ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲವಂತೆ. ಆದರೆ ಇದೀಗ ಊತ ಹೆಚ್ಚಾದ ಹಿನ್ನಲೆಯಲ್ಲಿ ಬಾಲಕನನ್ನು ಆಸ್ಪತ್ರೆಗೆ ಕರೆತರಲಾಗಿದೆ.

 

ಹುಡುಗನ ದವಡೆಯ ಎಕ್ಸರೆ ಮತ್ತು ಸಿಟಿ ಸ್ಕ್ಯಾನ್ ಮಾಡಿದ ವೈದ್ಯರು ಆತನ ದವಡೆಯಲ್ಲಿ ಸಾಕಷ್ಟು ಮೂಲ ಹಲ್ಲುಗಳಿರುವುದನ್ನು ಕಂಡುಕೊಂಡರು. ಆದ ಕಾರಣ ಶಸ್ತ್ರ ಚಿಕಿತ್ಸೆ ನಡೆಸಲು ನಿರ್ಧರಿಸಿದರು.` ಸತತ 5 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು ಎಲ್ಲಾ ಹಲ್ಲುಗಳನ್ನು ಹೊರತೆಗೆದಿದ್ದಾರೆ. ಒಬ್ಬ ವ್ಯಕ್ತಿಯು ಇಷ್ಟೊಂದು ಹಲ್ಲುಗಳನ್ನು ಹೊಂದಿರುವುದು ವಿಶ್ವದ ಮೊಟ್ಟಮೊದಲ ಪ್ರಕರಣ ಎಂದು ವೈದ್ಯರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ