ಮಹಿಳೆಯರು ಎಳೆದಾಡಿದ್ದು ಯಾರನ್ನು?
ಬುಧವಾರ, 8 ಮೇ 2019 (21:31 IST)
ಮಹಿಳೆಯರ ಆಕ್ರೋಶ ಕಟ್ಟೆಯೊಡೆದಿದ್ದು ಅಲ್ಲಿನ ಜನರನ್ನು ಎಳೆದಾಡಿ ತಮ್ಮ ಸಿಟ್ಟು ತೀರಿಸಿಕೊಂಡಿದ್ದಾರೆ.
ತಮಿಳುನಾಡು ಮೂಲದ ಖಾಸಗಿ ಸಂಸ್ಥೆಯಿಂದ ವಂಚನೆ ಮಾಡಿರುವ ಆರೋಪ ಕೇಳಿಬಂದಿದೆ.
ಮಹಿಳಾ ಸಂಘಗಳ ಸದಸ್ಯರ ಆಕ್ರೋಶ ಹೆಚ್ಚಾಗಿರುವ ಘಟನೆ ನಡೆದಿದೆ. ಮಂಡ್ಯ ಜಿಲ್ಲೆಯ ಮಳವಳ್ಳಿ ಪಟ್ಟಣದಲ್ಲಿ ನಡೆದ ಘಟನೆ ಇದಾಗಿದೆ.
ದಾನ್ ಫೌಂಡೇಶನ್ ಸಂಸ್ಥೆಯ ಸಿಬ್ಬಂದಿಯನ್ನು ಎಳೆದಾಡಿದ್ದಾರೆ ಮಹಿಳೆಯರು. ಸಂಸ್ಥೆಯಡಿ ಕಾರ್ಯ ನಿರ್ವಹಿಸುತ್ತಿರುವ ಎರಡು ಮಹಿಳಾ ಒಕ್ಕೂಟಗಳು.
ಮಹಿಳಾ ಒಕ್ಕೂಟದ ಹಣ, ಜಮೀನು ಕಬಳಿಸಲು ಯತ್ನ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಹೀಗಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದೆ ಈ ಪ್ರಕರಣ.
ಘಟನೆ ಸಂಬಂಧ ಮಳವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.