ಮೈಸೂರಿನ ಖ್ಯಾತ ಉರಗ ತಜ್ಞ ಸ್ನೇಕ್ ಶಾಮ್ ರಿಂದ ಭಾರೀ ಗಾತ್ರದ ಹೆಬ್ಬಾವು ರಕ್ಷಣೆ ಮಾಡಲಾಗಿದೆ.
ಕಳೆದ ರಾತ್ರಿ ಸುಮಾರಿಗೆ ಜೋರು ಮಳೆ ಬಿಳುತ್ತಿದ್ದ ಸಂದರ್ಭದಲ್ಲಿ ಕಾಣಿಸಿಕೊಂಡಿತ್ತು ಹೆಬ್ಬಾವು. ಮೈಸೂರಿನ ರಾಜೀವ್ ನಗರದಲ್ಲಿರುವ ಆರ್.ಟಿ.ಓ ಕಚೇರಿ 55 ರ ಬಳಿ ಕಾಣಿಸಿಕೊಂಡಿದ್ದ ಹೆಬ್ಬಾವು ರಕ್ಷಣೆ ಮಾಡಲಾಗಿದೆ.
ವಾಹನ ಚಾಲನಾ ಪರವಾನಗಿ ನೀಡುವ ಮುನ್ನಾ ನಡೆಯುವ ವಾಹನ ಪರೀಕ್ಷಾರ್ಥ ಚಾಲನಾ ಪಥದಲ್ಲಿದ್ದ ಹಾವನ್ನು ಗಮನಿಸಿದ್ದರು ಭದ್ರತಾ ಸಿಬ್ಬಂದಿ ಪ್ರಕಾಶ್. ನಂತರ ಸ್ನೇಕ್ ಶಾಮ್ ಗೆ ಕರೆ ಮಾಡಿ ತಿಳಿಸಿದ್ದರು ಪ್ರಕಾಶ್.
ಆ ಬಳಿಕ ಸ್ಥಳಕ್ಕಾಮಿಸಿ ಸುಮಾರು 8 ಅಡಿ ಉದ್ದದ್ದ ಹೆಬ್ಬಾವನ್ನು ಸುರಕ್ಷಿತವಾಗಿ ಹಿಡಿದಿದ್ದಾರೆ ಸ್ನೇಕ್ ಶಾಮ್.
ಡಿ.ಸಿ.ಎಫ್ ಪ್ರಶಾಂತ್ ರವರ ಸಲಹೆಯ ಮೇರೆಗೆ ರಕ್ಷಿಸಿರುವ ಹೆಬ್ಬಾವನ್ನು ಅರಣ್ಯಕ್ಕೆ ಬಿಡಲು ತೀರ್ಮಾನಿಸಿದ್ದಾರೆ ಸ್ನೇಕ್ ಶಾಮ್.