ಆತ್ಮಹತ್ಯೆ ಮಾಡಿಕೊಂಡ ರೈತ: ಬ್ಯಾಂಕ್ ಮ್ಯಾನೇಜರ್ ಅರೆಸ್ಟ್ ಯಾಕೆ ಗೊತ್ತಾ?

ಶನಿವಾರ, 15 ಸೆಪ್ಟಂಬರ್ 2018 (14:08 IST)
ಸಾಲ ಮರುಪಾವತಿ ಮಾಡಬೇಕೆಂದು ಬ್ಯಾಂಕ್ ರೈತನಿಗೆ ನೋಟೀಸ್ ‌ನೀಡಿತ್ತು. ನೋಟೀಸ್ ನೋಡಿ ಮನನೊಂದು ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದು, ಬ್ಯಾಂಕ್ ಮ್ಯಾನೇಜರ್ ಅರೆಸ್ಟ್ ಆಗಿದ್ದಾರೆ.

ಬ್ಯಾಂಕ್ ನೋಟೀಸ್ ಗೆ ಮನನೊಂದ ರೈತ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ
ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ಕವಲಗಿ ಗ್ರಾಮದಲ್ಲಿ ನಡೆದಿದೆ.

ಆನಂದ ಭೀಮಪ್ಪ‌ ಠಕ್ಕಳಕಿ 45 ಆತ್ಮಹತ್ಯೆ ಮಾಡಿಕೊಂಡಿದ್ದ ರೈತನಾಗಿದ್ದಾನೆ.
ನೋಟೀಸ್ ನೀಡಿದ್ದ  ಬಸವನವಾಗೇವಾಡಿ ತಾಲೂಕಿನ ತೆಲಗಿ ಗ್ರಾಮದ ಕೆನೆರಾ ಬ್ಯಾಂಕ್  ಮ್ಯಾನೇಜರ್ ರಾಹುಲ್ ಪೋಳ ಬಂಧನವಾಗಿದೆ.

ರೈತ ಆನಂದ ಠಕ್ಕಳಕಿಗೆ ಸಾಲ ಮರುಪಾವತಿಗೆ ನೊಟೀಸ್‌ ನೀಡಿದ್ದ ಕಾರಣ ಬ್ಯಾಂಕ್ ಮ್ಯಾನೇಜರ್ ಅರೆಸ್ಟ್ ಆಗಿದ್ದಾರೆ. ಕೊಲ್ಹಾರ ಠಾಣೆ ಪೊಲೀಸರಿಂದ ಬ್ಯಾಂಕ್ ಮ್ಯಾನೇಜರ್ ರಾಹುಲ್ ಬಂಧನವಾಗಿದ್ದು, ಪೊಲೀಸ್ ಠಾಣೆಯಲ್ಲಿ ರಾಹುಲ್ ವಿಚಾರಣೆ ನಡೆಯುತ್ತಿದೆ.

ಸಾಲ ಮರು ಪಾವತಿ ನೋಟೀಸ್ ನೀಡಿದ್ದ ಕುರಿತು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಈ ಕುರಿತು ಕೊಲ್ಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಕೆನೆರಾ ಬ್ಯಾಂಕ್ ತೆಲಗಿ ಶಾಖೆಯಿಂದ  ಸಾಲ ಮರು ಪಾವತಿಯ ನೋಟೀಸ್ ನೀಡಿದ್ದ ಕಾರಣ ಆನಂದ ನೇಣಿಗೆ ಶರಣಾಗಿದ್ದ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ