ಎಚ್ಚರಿಕೆ! ಇನ್ನುಮುಂದೆ ಎಸ್.ಬಿ.ಐ. ಖಾತೆಗೆ ಹಣ ಬೇರೆಯವರಿಂದ ಜಮಾ ಮಾಡುವಂತಿಲ್ಲ
ಬುಧವಾರ, 12 ಸೆಪ್ಟಂಬರ್ 2018 (06:58 IST)
ಬೆಂಗಳೂರು : ನೋಟು ನಿಷೇಧದ ಸಂದರ್ಭದಲ್ಲಿ ಬೇರೆಯವರ ಖಾತೆಗಳಿಗೆ ತಮ್ಮ ಹಣವನ್ನು ಜಮಾ ಮಾಡಿರುವ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಖಾತೆಗೆ ಹಣ ಹಾಕುವ ವಿಚಾರಕ್ಕೆ ಸಂಬಂಧಿಸಿದಂತೆ ಹೊಸ ನಿಯಮವೊಂದನ್ನು ಜಾರಿಗೆ ತಂದಿದೆ.
ಎಸ್.ಬಿ.ಐ. ಹೊಸ ನಿಯಮದ ಪ್ರಕಾರ, ಬ್ಯಾಂಕ್ ಖಾತೆಗೆ ಖಾತೆದಾರರನ್ನು ಬಿಟ್ಟು ಬೇರೆಯವರು ಹಣ ಜಮಾ ಮಾಡುವಂತಿಲ್ಲ. ಬ್ಯಾಂಕ್ ಶಾಖೆಗೆ ಹೋಗಿ ಹಣ ಜಮಾ ಮಾಡುವವರಿಗೆ ಮಾತ್ರ ಇದು ಅನ್ವಯವಾಗಲಿದೆ. ಆನ್ಲೈನ್ ನಲ್ಲಿ ಯಾರೂ ಬೇಕಾದ್ರೂ ಬೇರೆಯವರ ಖಾತೆಗೆ ಹಣ ಹಾಕಬಹುದಾಗಿದೆ.
ಆನ್ಲೈನ್ ವ್ಯವಹಾರ ಗೊತ್ತಿಲ್ಲದವರು ಬ್ಯಾಂಕ್ ಗೆ ಬೇರೆಯವರಿಂದ ಹಣ ಜಮಾ ಮಾಡುವುದಾದರೆ ಖಾತೆದಾರನ ಹಾಗೂ ಜಮಾದಾರನ ಒಪ್ಪಿಗೆ ಪತ್ರ ನೀಡಬೇಕಾಗುತ್ತದೆ. ಹಾಗೇ ಹಣ ಜಮೆಯಾದ ಮೇಲೆ ಬ್ಯಾಂಕ್ ಸಿಬ್ಬಂದಿ ಸಹಿ ಹಾಕಬೇಕಾಗುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.