ಸಿಎಂ ಸಿದ್ದರಾಮಯ್ಯಗೆ ಎಸ್‌ಸಿ-ಎಸ್‌ಟಿ ಸಮುದಾಯದ ಮೇಲೆ ಯಾಕೆ ಈ ಪರಿ ದ್ವೇಷ

Sampriya

ಶುಕ್ರವಾರ, 6 ಸೆಪ್ಟಂಬರ್ 2024 (19:47 IST)
Photo Courtesy BJP X
ಬೆಂಗಳೂರು: ಕರ್ನಾಟಕದ ವಸತಿ ಶಿಕ್ಷಣ ಸಂಘಗಳ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳ ವಸತಿ ಶಾಲೆಗಳ ಮೂಲ ಸೌಕರ್ಯಗಳಿಗಾಗಿ 2024-25ರ ಬಜೆಟ್ ನಲ್ಲಿ ನಯಾ ಪೈಸೆ ನೀಡಿಲ್ಲ. ಹೀಗಾಗಿ, ಪರಿಶಿಷ್ಟ ವಿದ್ಯಾರ್ಥಿಗಳು ಹರಿದ ಹಾಸಿಗೆ, ಧೂಳು ಹಿಡಿದ ದಿಂಬು, ಮುರುಕು ಡೆಸ್ಕ್‌ನಲ್ಲೇ ದಿನ ದೂಡುವಂತಾಗಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ ಹೊರಹಾಕಿ ಪೋಸ್ಟ್ ಹಂಚಿಕೊಂಡಿದೆ.

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ಸಂಬಂಧ ಬಿಜೆಪಿ ಪೋಸ್ಟ್‌ ಹಂಚಿಕೊಂಡಿದೆ.

ಶೋಷಿತ ಸಮುದಾಯವನ್ನು ಚುನಾವಣೆ ಬಂದಾಗ ಮಾತ್ರ ಓಲೈಸಲು ಹವಣಿಸುವ ಕಾಂಗ್ರೆಸ್
 ಸರ್ಕಾರ ನಿತ್ಯ ಶೋಷಿಸುವ ಮೂಲಕ ಮಜಾ ತೆಗೆದುಕೊಳ್ಳುತ್ತಿದೆ.

ಕರ್ನಾಟಕದ ವಸತಿ ಶಿಕ್ಷಣ ಸಂಘಗಳ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳ ವಸತಿ ಶಾಲೆಗಳ ಮೂಲ ಸೌಕರ್ಯಗಳಿಗಾಗಿ 2024-25ರ ಬಜೆಟ್ ನಲ್ಲಿ ನಯಾ ಪೈಸೆ ನೀಡಿಲ್ಲ. ಹೀಗಾಗಿ, ಪರಿಶಿಷ್ಟ ವಿದ್ಯಾರ್ಥಿಗಳು ಹರಿದ ಹಾಸಿಗೆ, ಧೂಳು ಹಿಡಿದ ದಿಂಬು, ಮುರುಕು ಡೆಸ್ಕ್‌ನಲ್ಲೇ ದಿನ ದೂಡುವಂತಾಗಿದೆ.

ಬೆಳೆದು ಬಂದ ಸಮಾಜಕ್ಕೆ ದ್ರೋಹ ಬಗೆದ ಮಹಾದೇವಪ್ಪನವರು ಕಣ್ಮುಚ್ಚಿ ಕುಳಿತ ಪರಿಣಾಮ ಶೋಷಿತರಿಗೆ ಸಿಗಬೇಕಾದ ಅನುದಾನ, ಸೌಲಭ್ಯ ಸಿಗುತ್ತಿಲ್ಲ. ಹಾಸಿಗೆ-ದಿಂಬಿನಲ್ಲೂ ಲೂಟಿ ಹೊಡೆದು ವಂಚಿಸಿದ್ದ ಸರ್ಕಾರವೀಗ ಅನುದಾನ ನೀಡದೆ ಪರಿಶಿಷ್ಟ ವಿದ್ಯಾರ್ಥಿಗಳಿಗೆ ದ್ರೋಹ ಬಗೆದಿದೆ. ಸಿಎಂ ಸಿದ್ದರಾಮಯ್ಯ ಅವರೇ, ಎಸ್.ಸಿ-ಎಸ್.ಟಿ ಸಮುದಾಯದ ಮೇಲೆ ನಿಮಗ್ಯಾಕೆ ಈ ಪರಿ ದ್ವೇಷ.?

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ