ಯುದ್ಧದ ಕ್ರೆಡಿಟ್ ದೇಶದ ಎಲ್ಲಾ ಸೈನಿಕರಿಗೆ ಹೋಗಲಿ, ಮೋದಿಗೆ ಯಾಕೆ: ಸಂತೋಷ್ ಲಾಡ್

Krishnaveni K

ಗುರುವಾರ, 15 ಮೇ 2025 (12:21 IST)
ಬೆಂಗಳೂರು: ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷದ ವೇಳೆ ಯುದ್ಧದ ಕ್ರೆಡಿಟ್ ಎಲ್ಲಾ ಸೈನಿಕರಿಗೆ ಸಲ್ಲಬೇಕು. ಕೇವಲ ಮೋದಿಗೆ ಮಾತ್ರ ಯಾಕೆ ಕ್ರೆಡಿಟ್ ನೀಡಲಾಗುತ್ತಿದೆ ಎಂದು ಸಚಿವ ಸಂತೋಷ್ ಲಾಡ್ ಪ್ರಶ್ನಿಸಿದ್ದಾರೆ.

ಪಹಲ್ಗಾಮ್ ಉಗ್ರ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ಆಪರೇಷನ್ ಸಿಂಧೂರ್ ನಡೆಸಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರರ ಅಡಗುದಾಣಗಳ ಮೇಲೆ ದಾಳಿ ನಡೆಸಿತ್ತು. ಇದಾದ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧದ ಸನ್ನಿವೇಶ ಉಂಟಾಗಿತ್ತು.

ಇದಾದ ಬಳಿಕ ಮೋದಿಯ ನಾಯಕತ್ವದ ಬಗ್ಗೆ ಭಾರೀ ಹೊಗಳಿಕೆ ವ್ಯಕ್ತವಾಗಿತ್ತು. ಇದೇ ಕಾರಣಕ್ಕೆ ಸಂತೋಷ್ ಲಾಡ್ ಈಗ ಮಾಧ್ಯಮದ ಮುಂದೆ ಕಿಡಿ ಕಾರಿದ್ದಾರೆ. ‘ಆಪರೇಷನ್ ಸಿಂಧೂರ್ ಮತ್ತು ಭಾರತ-ಪಾಕಿಸ್ತಾನದ ಸಂಘರ್ಷದಲ್ಲಿ ಯಶಸ್ಸಿನ ಸಂಪೂರ್ಣ ಕ್ರೆಡಿಟ್ ಭಾರತೀಯ ಸೇನೆಗೆ ಸಲ್ಲಬೇಕು. ಇದಕ್ಕೆ ಮೋದಿ ಒಬ್ಬರೇ ಮಾಡಿದ್ದು ಎಂಬಂತೆ ಕ್ರೆಡಿಟ್ ಯಾಕೆ ಕೊಡಲಾಗುತ್ತಿದೆ’ ಎಂದು ಪ್ರಶ್ನೆ ಮಾಡಿದ್ದಾರೆ.

ನಮ್ಮ ದೇಶಕ್ಕೆ ಪಾಕಿಸ್ತಾನವನ್ನು ಹೊಡೆದು ಹಾಕಲು ಒಳ್ಳೆಯ ಅವಕಾಶವಿತ್ತು. ದೇಶದ ಜನ, ಪಕ್ಷಗಳೂ ಬೆಂಬಲಿಸಿದ್ದವು. ಆದರೆ ಟ್ರಂಪ್ ಸಾಹೇಬರು ಹೇಳಿದ್ರು ಅಂತ ಕದನ ವಿರಾಮಕ್ಕೆ ಒಪ್ಪಿಕೊಂಡು ಮೋದಿ ಎಲ್ಲಾ ಅವಕಾಶವನ್ನು ಹಾಳು ಮಾಡಿದ್ರು ಎಂದು ಸಂತೋಷ್ ಲಾಡ್ ಕಿಡಿ ಕಾರಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ