Operation Sindoor ಟಾರ್ಗೆಟ್ ಏನಾಗಿತ್ತು ಎಂದು ಬಹಿರಂಗಪಡಿಸಿದ ಪ್ರಧಾನಿ ಮೋದಿ
ಇಂದು ಪಂಜಾಬ್ ನ ಆದಂಪುರ ವಾಯುನೆಲೆಗೆ ಭೇಟಿ ನೀಡಿದ ಪ್ರಧಾನಿ ಮೋದಿ ಯೋಧರೊಂದಿಗೆ ಬೆರೆತರು. ಬಳಿಕ ಮಾತನಾಡಿದ ಅವರು ಪಾಕಿಸ್ತಾನಕ್ಕೆ ಖಡಕ್ ಸಂದೇಶ ರವಾನಿಸಿದ್ದಾರೆ.
ಆಪರೇಷನ್ ಸಿಂಧೂರ್ ವೇಳೆ ಪಾಕಿಸ್ತಾನದ ಉಗ್ರರ ಮುಖ್ಯ ಕಚೇರಿಗಳನ್ನು ಧ್ವಂಸ ಮಾಡುವುದೇ ನಮ್ಮ ಟಾರ್ಗೆಟ್ ಆಗಿತ್ತು. ನಮ್ಮ ವಾಯುಸೇನೆ ಕೇವಲ 20-25 ನಿಮಿಷದಲ್ಲಿ ಅದನ್ನು ಮಾಡಿ ಮುಗಿಸಿತು ಎಂದು ಮೋದಿ ಕೊಂಡಾಡಿದ್ದಾರೆ.
ನಾವು ಭಯೋತ್ಪಾದಕರು ಮತ್ತು ಭಯೋತ್ಪಾದನೆ ಪ್ರೋತ್ಸಾಹಿಸುವವರ ಮುಂದೆ ಒಂದು ಲಕ್ಷಣ ರೇಖೆ ಎಳೆದಿದ್ದೇವೆ. ಅದನ್ನು ದಾಟಿ ಬಂದರೆ ತಕ್ಕ ಪಾಠ ಕಲಿಸಬೇಕಾಗುತ್ತದೆ. ಇದನ್ನು ಈ ಹಿಂದೆ ನಡೆದ ಏರ್ ಸ್ಟ್ರೈಕ್, ಸರ್ಜಿಕಲ್ ಸ್ಟ್ರೈಕ್ ಮತ್ತು ಈಗ ನಡೆದ ಆಪರೇಷನ್ ಸಿಂಧೂರ್ ನಲ್ಲಿ ನೋಡಿದ್ದೇವೆ. ಭಾರತ ತಕ್ಕ ತಿರುಗೇಟು ನೀಡಲಿದೆ ಎಂದು ಮೋದಿ ಎಚ್ಚರಿಕೆ ನೀಡಿದ್ದಾರೆ.