ರಕ್ಷಾ ಬಂಧನವನ್ನ ಯಾಕೆ ಆಚರಿಸಲಾಗುತ್ತದೆ ? ಆದರ ವಿಶೇಷತೆ ಏನು ಗೊತ್ತಾ?
ರಕ್ಷಾ ಬಂಧನವನ್ನು ರೇಷ್ಮೆ ದಾರದಿಂದ ಮಾಡಲಾಗುತ್ತದೆ, ರಕ್ಷಾ ಬಂಧನ ಬಂತೆಂದರೆ ಸಾಕು, ಎಲ್ಲಾ ಅಂಗಡಿಗಳಲ್ಲಿ ರಕ್ಷೆಗಳದ್ದೆ ಹಬ್ಬ ತರತರಹದ ರಕ್ಷೆಯನ್ನು ನೋಡುವುದೇ ಒಂದು ಚೆಂದ. ಈ ಸಮಯದಲ್ಲಂತೂ ರಕ್ಷಾಬಂಧನಕ್ಕೆ ಎಲ್ಲಿಲ್ಲದ ಬೇಡಿಕೆ. ರಕ್ಷಾ ಬಂಧನ ಮುಗಿದ ನಂತರವೂ ರಕ್ಷೆ ಕಟ್ಟಿಕೊಳ್ಳುವುದು ಮುಗಿಯುವುದಿಲ್ಲ. ಎಲ್ಲರ ಕೈಯಲ್ಲೂ ರಕ್ಷಾಬಂಧನ ರಾರಾಜಿಸುತ್ತದೆ. ಈ ರಕ್ಷಾಬಂಧನಕ್ಕೆ ಅದರದ್ದೇ ಆದ ಇತಿಹಾಸವು ಇದೆ. ಪುರಾಣದ ಪ್ರಕಾರ ಮಹಾಭಾರತದ ಸಂದರ್ಭದಲ್ಲಿ ಶ್ರೀ ಕೃಷ್ಣನಿಗೆ ಆಕಸ್ಮಿಕವಾಗಿ ತನ್ನ ಬೆರಳು ಸುದರ್ಶನ ಚಕ್ರದಿಂದ ಕತ್ತರಿಸಿದಾಗ ಪಾಂಡವರ ಪತ್ನಿ ದ್ರೌಪದಿ ಶ್ರೀ ಕೃಷ್ಣನ ನೋಡಿ ತಕ್ಷಣ ತನ್ನ ವಸ್ತ್ರದ ಒಂದು ತುಂಡನ್ನು ಕತ್ತರಿಸಿ ಆ ಬೆರಳಿಗೆ ಕಟ್ಟುತ್ತಾಳೆ ಇದನ್ನೇ ರಕ್ಷೆ ಎಂದು ಹೇಳಲಾಗುತ್ತದೆ ಅಂತಹ ಸಂದರ್ಭದಲ್ಲಿ ಶ್ರೀ ಕೃಷ್ಣನು ದುಷ್ಟರಿಂದ ನಿನ್ನನ್ನು ರಕ್ಷಣೆ ಮಾಡುತ್ತೇನೆ ಎಂಬ ಭರವಸೆಯನ್ನು ನೀಡುತ್ತಾನೆ. ನಂತರದ ದಿನಗಳಲ್ಲಿ ಕೌರವರ ವಿರುದ್ಧ ಪಗಡೆಯಾಟದಲ್ಲಿ ಪಾಂಡವರು ಸೋತಾಗ ಕೌರವರು ದ್ರೌಪದಿಯ ವಸ್ತ್ರಾಪಹರಣ ಮಾಡಲು ಮುಂದಾದ ಸಂದರ್ಭದಲ್ಲಿ ಸೀರೆಯನ್ನು ಎಷ್ಟು ಎಳೆದರೂ ಮುಗಿಯದ ಹಾಗೆ ಮಾಡಿ ಶ್ರೀ ಕೃಷ್ಣನು ತನ್ನ ಮಾತಿನಂತೆ ದ್ರೌಪದಿಯನ್ನು ರಕ್ಷಣೆ ಮಾಡುತ್ತಾರೆ. ಇದೆ ಮುಂದೆ ಅಣ್ಣ ತಂಗಿಯರ ಹಬ್ಬ ರಕ್ಷಾಬಂಧನವಾಗಿ ಆಚರಿಸಲಾಗುತ್ತದೆ ಎಂದು ಹೇಳಲಾಗುತ್ತದೆ. ಹೀಗೆ ಶ್ರೀ ರಕ್ಷೆ ಯನ್ನು ನೀಡುವ ರಕ್ಷಾ ಬಂಧನ ಅಣ್ಣ ತಂಗಿಯ ಅನುಬಂಧಕ್ಕೆ ಸಾಕ್ಷಿಯ ಸಂಕೇತವಾಗಿದೆ.