ಕೇರಳ ಸರ್ಕಾರದ ನಿರ್ಲಕ್ಷ್ಯದಿಂದಲೇ ಕಾಸರಗೋಡಿನಲ್ಲಿ ಅತೀ ಹೆಚ್ಚು ಸೋಂಕು?
ಈಗ ಗಡಿ ಬಂದ್ ಆಗಿರುವುದು ಕೇರಳ ಸರ್ಕಾರಕ್ಕೆ ನುಂಗಲಾರದ ತುತ್ತಾಗಿದೆ. ಇದರಿಂದಾಗಿ ಇಲ್ಲಿ ಕೊರೋನಾ ಪೀಡಿತರಿಗೆ ಕರ್ನಾಟಕದಲ್ಲಿ ಚಿಕಿತ್ಸೆ ಕೊಡಿಸಲು ಸಾಧ್ಯವಾಗುತ್ತಿಲ್ಲ. ಇದುವೇ ಈಗ ಕೇರಳ ಸಿಎಂ ಪಿಣರಾಯಿ ವಿಜಯನ್ ಆಕ್ರೋಶಕ್ಕೂ ಕಾರಣವಾಗಿರುವುದು. ಅದೇ ಕಾರಣಕ್ಕೆ ಕಾಸರಗೋಡು ಗಡಿ ತೆರೆಯುವಂತೆ ಕೇಂದ್ರದಿಂದ ಹಿಡಿದು, ಸುಪ್ರೀಂಕೋರ್ಟ್ ವರೆಗೆ ಕದ ತಟ್ಟುತ್ತಿದ್ದಾರೆ.