ಬಿಜೆಪಿ ಯಾತ್ರೆ ನಡುವೆ ಜನ ಕುರ್ಚಿ ಬಿಟ್ಟು ಎದ್ದು ಹೋಗಿದ್ದೇಕೆ ಗೊತ್ತಾ?

ಶುಕ್ರವಾರ, 3 ನವೆಂಬರ್ 2017 (09:38 IST)
ಬೆಂಗಳೂರು: ನಿನ್ನೆ ಕರ್ನಾಟಕ ನವನಿರ್ಮಾಣ ಪರಿವರ್ತನಾ ಯಾತ್ರೆಗೆ ಚಾಲನೆ ನೀಡಿದ್ದ ಬಿಜೆಪಿ ನಾಯಕರು ಜನರನ್ನು ಒಟ್ಟುಗೂಡಿಸಲು ಹರಸಾಹಸ ಪಡಬೇಕಾಯಿತು. ಇದಕ್ಕೆ ಕಾರಣವೇನು ಗೊತ್ತಾ?

 
ಅಷ್ಟಕ್ಕೂ ಅಲ್ಲಿ ಯಾಕೆ ಖಾಲಿ ಕುರ್ಚಿಗಳೇ ಹೆಚ್ಚಿತ್ತು? ಯಾಕೆ ಜನ ಅರ್ಧದಿಂದಲೇ ಎದ್ದು ಹೋಗುತ್ತಿದ್ದರು? ಇದಕ್ಕೆಲ್ಲಾ ಕಾರಣ ಬಿಸಿಲು. ಉರಿಬಿಸಿಲಿನಲ್ಲಿ ಕೂರಲು ಜನರಿಗೆ ಸರಿಯಾದ ಪೆಂಡಾಲ್ ವ್ಯವಸ್ಥೆ ಮಾಡಿರಲಿಲ್ಲ.

ಹಾಗಾಗಿ ಬಿಸಿಲಿನ ತಾಪ ತಾಳಲಾರದೇ ಸಮಾವೇಷವೂ ಬೇಡ, ಭಾಷಣವೂ ಬೇಡ ಎಂದು ಜನರು ಎದ್ದು ಹೋಗುತ್ತಿದ್ದರು ಎಂದು ತಿಳಿದುಬಂದಿದೆ. ಅಂತೂ ಇದರಿಂದ ರಾಜ್ಯ ನಾಯಕರು ರಾಷ್ಟ್ರಾಧ್ಯಕ್ಷರ ಎದುರು ಮುಜುಗರ ಅನುಭವಿಸಿದ್ದಂತೂ ಸತ್ಯ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ