ಶಿಕ್ಷಕರ ದಿನಾಚರಣೆ ಆರಂಭವಾಗಿದ್ದು ಹೇಗೆ?

ಸೋಮವಾರ, 5 ಸೆಪ್ಟಂಬರ್ 2022 (08:30 IST)
ಬೆಂಗಳೂರು: ವಿದ್ಯೆ ಕಲಿಸುವ ಗುರುಗಳನ್ನು ನೆನೆಯಲು, ಅವರಿಗಾಗಿ ಒಂದು ದಿನ ಮೀಸಲಿಡಬೇಕೆಂಬ ಉದ್ದೇಶದಿಂದ ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನಾಚರಣೆ ಆಚರಿಸಲಾಗುತ್ತದೆ.

ವೃತ್ತಿಯಲ್ಲಿ ಶಿಕ್ಷಕರಾಗಿದ್ದ ಮಾಜಿ ರಾಷ್ಟ್ರಪತಿ ಡಾ. ಸರ್ವಪಳ್ಳಿ ರಾಧಾಕೃಷ್ಣನ್ ಅವರ ಜನ್ಮದಿನವನ್ನು ಶಿಕ್ಷಕರ ದಿನವೆಂದು ಆಚರಿಸಲಾಗುತ್ತದೆ.

ಅವರು ರಾಷ್ಟ್ರಪತಿಗಳಾಗಿ ಆಯ್ಕೆಯಾದಾಗ ಅವರ ವಿದ್ಯಾರ್ಥಿಗಳು ಜನ್ಮದಿನವನ್ನು ಅದ್ಧೂರಿಯಾಗಿ ಆಚರಿಸಲು ಬಯಸಿದ್ದರಂತೆ. ಆದರೆ ನನ್ನ ಜನ್ಮದಿನವನ್ನು ಅದ್ಧೂರಿಯಾಗಿ ಆಚರಿಸುವುದು ಬೇಡ. ಅದರ ಬದಲು ಈ ದಿನವನ್ನು ಶಿಕ್ಷಕರಿಗಾಗಿ ಮೀಸಲಿಟ್ಟು, ಶಿಕ್ಷಕರ ದಿನಾಚರಣೆ ಎಂದು ಆಚರಿಸಿ ಎಂದು ಸಲಹೆ ಕೊಟ್ಟರಂತೆ. ಅಂದಿನಿಂದ ಸೆಪ್ಟೆಂಬರ್ 5 ಶಿಕ್ಷಕರ ದಿನಾಚರಣೆಯಾಗಿ ಆಚರಿಸಿಕೊಂಡು ಬರಲಾಗುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ