ಡಿಕೆ ಶಿವಕುಮಾರ್ ವಾರ್ನಿಂಗ್ ಕೊಟ್ರೆ ನಾನ್ಯಾಕೆ ಕೇಳಲಿ? ತಗ್ಗೋದೇ ಇಲ್ಲ ಎಂದ ಕೆಎನ್ ರಾಜಣ್ಣ

Sampriya

ಶನಿವಾರ, 29 ಜೂನ್ 2024 (16:26 IST)
Photo Courtesy X
ಬೆಂಗಳೂರು:  ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ಹೆಚ್ಚುವರಿ ಡಿಸಿಎಂ ಹುದ್ದೆ ಕೂಗಾ ಜೋರಾದ ಬೆನ್ನಲ್ಲೇ ಡಿಸಿಎಂ ಶಿವಕುಮಾರ್ ಅವರು ಸಚಿವ ಕೆಎನ್‌ ರಾಜಣ್ಣ ಅವರಿಗೆ ವಾರ್ನಿಂಗ್ ನೀಡಿದರೂ ಅದಕ್ಕೆ ‌ಕ್ಯಾರೇ ಎನ್ನದೆ ಮತ್ತೇ ಆಕ್ರೋಶ ಹೊರಹಾಕಿದ್ದಾರೆ.  

ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿಕೆ ಶಿವಕುಮಾರ್ ಅವರು ಹೆಚ್ಚುವರಿ ಡಿಸಿಎಂ ಹುದ್ದೆಯ ಬಗ್ಗೆ ಯಾರೂ ಮಾತನಾಡದೆ, ಬಾಯಿಗೆ ಬೀಗ ಹಾಕೊಂಡು ತೆಪ್ಪಂಗೆ ಇರಿ. ಒಂದು ವೇಳೆ ಮಾತನಾಡಿದ ಮುಖಂಡರಿಗೆ ನೋಟಿಸ್  ನೀಡುವ ಎಚ್ಚರಿಕೆ ನೀಡಿದ್ದರು.

ಈ ಬಗ್ಗೆ ಇಂದು  ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಕೆಎನ್‌ ರಾಜಣ್ಣ ಪ್ರತಿಕ್ರಿಯಿಸಿ, ಹೇಳಿದರೆ ಏನು ತಪ್ಪಾಗುತ್ತೆ. ವಾರ್ನಿಂಗ್​​ಗೆಲ್ಲಾ ನಾನು ಕೇಳುತ್ತೇನಾ. ಬಾಯಿಗೆ ಎಲ್ಲರೂ ಬೀಗ ಹಾಕಿಕೊಳ್ಳಬೇಕು. ಅವರು ಹೇಳಿದ್ದಕ್ಕೆ ಬಾಯಿ ಮುಚ್ಚಿಕೊಂಡು ಇರಲು ಆಗಲ್ಲ ಎಂದು ವಾಗ್ದಾಳಿ ಮಾಡಿದ್ದಾರೆ.

ಇನ್ನೂ ಚಂದ್ರಶೇಖರ್ ಸ್ವಾಮಿಗಳು ಹೇಳಿದಂತೆ ಸಿಎಂ ಮಾಡುವುದಕ್ಕೆ ಆಗುತ್ತಾ? ಎಲ್ಲರೂ ಸುಮ್ಮನೆ ಇದ್ರೆ ನಾನೂ ಸುಮ್ಮನೆ ಇರುತ್ತೇನೆ. ಸಿದ್ದರಾಮಯ್ಯ ರಾಜೀನಾಮೆ ಕೇಳಿದ್ರೆ ಸುಮ್ಮನಿರಬೇಕಾ? ಸ್ವಾಮೀಜಿಗಳು ಹೇಳೋದನ್ನು ಕೇಳೋದಕ್ಕೆ ಆಗುತ್ತಾ ಎಂದು ತಿರುಗೇಟು ನೀಡಿದರು.

ನಾನು ಹಗರಣ ಮಾಡಿದರೆ ತನಿಖೆ ಮಾಡಲಿ. ಬಡವರ ಪರ ಸಿಎಂ ಸಿದ್ದರಾಮಯ್ಯ ಕೆಲಸ ಮಾಡಿದ್ದು, ಅದಕ್ಕೆ ಅವರ ಜತೆ ನಾವಿದ್ದೇವೆ. ಇನ್ನೂ ಸಂಸದರಾಗಿ ಒಳ್ಳೆಯ ಕೆಲಸ ಮಾಡಿದ ಸಂಸದರದಲ್ಲಿ ಡಿ.ಕೆ.ಸುರೇಶ್ ಅವರು ಪ್ರಮುಖರು. ಯಾರು ಸೋಲಿಸಿದ್ದು, ಸ್ವಾಮೀಜಿಗಳು ಒಂದಾಗಿ ಅವರನ್ನು ಸೋಲಿಸಿದ್ದರು. ದೇವೇಗೌಡರು ಹುಟ್ಟು ಹಾಕಿದ ಸ್ವಾಮೀಜಿಗಳು ಇವರು. ಯಾರನ್ನ ಸಿಎಂ ಮಾಡಬೇಕೆಂದು ವರಿಷ್ಠರು, ಶಾಸಕರು ನಿರ್ಧರಿಸುತ್ತಾರೆ. ಸ್ವಾಮೀಜಿಗಳು ಹೇಳಿದಂತೆ ಸಿಎಂ ಮಾಡುವುದಕ್ಕೆ ಆಗಲ್ಲ ಎಂದು ತಿರುಗೇಟು ನೀಡಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ