ಕೊರೋನಾ ರೋಗಿ ಪಕ್ಕದಲ್ಲೇ ಇದ್ದರೂ ನೆಗೆಟಿವ್ ವರದಿ ಬರೋದು ಯಾಕೆ? ಕಾರಣ ಇಲ್ಲಿದೆ
ಕೆಲವೊಮ್ಮೆ ಆರ್ ಟಿಪಿಸಿಆರ್ ಟೆಸ್ಟ್ ಮಾಡುವಾಗ ಸರಿಯಾಗಿ ಗಂಟಲು ದ್ರವ ಮಾದರಿ ತೆಗೆದುಕೊಳ್ಳದೇ ಇದ್ದರೆ ಈ ರೀತಿಯ ಪ್ರಮಾದಗಳಾಗುತ್ತವೆ ಎನ್ನುವುದು ತಜ್ಞರ ಅಭಿಪ್ರಾಯ. ಕೆಲವೊಮ್ಮೆ ಪರೀಕ್ಷೆಗೊಳಪಟ್ಟ ಮೇಲೆ ರೋಗಗ್ರಸ್ತ ವೈರಾಣುಗಳು ಪತ್ತೆಯಾಗಬಹುದು.
ಇನ್ನು ಒಮಿಕ್ರಾನ್ ಪ್ರಕರಣಗಳಲ್ಲಿ ಆರು ದಿನಗಳೊಳಗಾಗಿ ಮಾದರಿ ಸಂಗ್ರಹಿಸಿದರೆ ಕೆಲವೊಮ್ಮೆ ಸಂಪರ್ಕಿತರಲ್ಲಿ ಲಕ್ಷಣಗಳು ಕಾಣದೇ ಇರಬಹದು. ಹೀಗಾಗಿ ರೋಗಿಗಳ ಪಕ್ಕದಲ್ಲಿದ್ದು, ಲಕ್ಷಣಗಳಿದ್ದರೂ ನಿಮಗೆ ನೆಗೆಟಿವ್ ವರದಿ ಬಂದಿತೆಂದ ಮಾತ್ರಕ್ಕೆ ನಿಮಗೆ ಕೊರೋನಾ ಸೋಂಕುಗಳಿಲ್ಲ ಎಂದು ನಿರಾಳವಾಗಬೇಕಿಲ್ಲ. ನಿಮ್ಮ ಎಚ್ಚರಿಕೆಯಲ್ಲಿರಬೇಕು ಎಂಬುದು ತಜ್ಞರ ಅಭಿಪ್ರಾಯ.