ಚಾಕ್ಲೇಟ್ ತಂದು ಕೊಟ್ಟಿಲ್ಲವೆಂದು ಪತ್ನಿ ಆತ್ಮಹತ್ಯೆ!

ಸೋಮವಾರ, 10 ಏಪ್ರಿಲ್ 2023 (12:29 IST)
ಬೆಂಗಳೂರು : ಪತಿ ಚಾಕ್ಲೇಟ್ ತಂದು ಕೊಟ್ಟಿಲ್ಲವೆಂದು ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನ ಹೆಣ್ಣೂರಿನಲ್ಲಿ ನಡೆದಿದೆ.
 
ನಂದಿನಿ (30) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಆರು ವರ್ಷದ ಹಿಂದೆ ನಂದಿನಿ ಮದುವೆಯಾಗಿದ್ದಳು. ಈಕೆಯ ಪತಿ ಸಲೂನ್ ನಲ್ಲಿ ಕೆಲಸ ಮಾಡಿಕೊಂಡಿದ್ರು. ಗುರುವಾರ ಬೆಳಗ್ಗೆ ಪತಿ ಕೆಲಸಕ್ಕೆ ಹೊರಟಿದ್ದರು. ಈ ವೇಳೆ ಚಾಕ್ಲೇಟ್ ತಂದು ಕೊಡುವಂತೆ ಪತ್ನಿ ನಂದಿನಿ ಹೇಳಿದ್ದಳು.

ಇತ್ತ ಮಧ್ಯಾಹ್ನವಾದರು ಪತಿ ಚಾಕ್ಲೇಟ್ ತಂದುಕೊಟ್ಟಿರಲಿಲ್ಲ. ಇದರಿಂದ ಬೇಸತ್ತು ಪತ್ನಿ ನಂದಿನಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಎಂದಿನಂತೆ ಸಂಜೆ ಕೆಲಸ ಮುಗಿಸಿ ಹೊರಡುವಾಗ ಪತಿ ನಂದಿನಿಗೆ ಕರೆ ಮಾಡಿದ್ದಾರೆ. ಈ ವೇಳೆ ಪತ್ನಿ ಕರೆ ಸ್ವೀಕರಿಸಲಿಲ್ಲ. ಮನೆಗೆ ಬಂದು ನೋಡಿದಾಗ ನೇಣು ಹಾಕಿಕೊಂಡಿರೋದು ಬೆಳಕಿಗೆ ಬಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ