ಅನೈತಿಕ ಸಂಬಂಧಕ್ಕಾಗಿ ಪ್ರಿಯಕರನ ಜತೆ ಸೇರಿಸಿಕೊಂಡು ಪತಿಯ ಕತ್ತು ಹಿಸುಕಿ ಕೊಂದ ಪತ್ನಿ
ಶನಿವಾರ, 3 ಅಕ್ಟೋಬರ್ 2020 (08:23 IST)
ಗದಗ : ಅನೈತಿಕ ಸಂಬಂಧಕ್ಕಾಗಿ ಮಹಿಳೆಯೊಬ್ಬಳು ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಕೊಲೆ ಮಾಡಿದ ಘಟನೆ ಗದಗ ತಾಲೂಕಿನ ಕಬಲಾಯತಕಟ್ಟೆ ತಾಂಡದಲ್ಲಿ ನಡೆದಿದೆ.
ಲಕ್ಷ್ಮಣ ಪಾಂಡಪ್ಪ ಲಮಾಣಿ(39) ಕೊಲೆಯಾದ ಪತಿ. ಪತ್ನಿ ಲಲಿತಗೆ 4 ವರ್ಷಗಳಿಂದ ಸೋಮಪ್ಪ ಲಮಾಣಿ ಕೊತೆ ಅನೈತಿಕ ಸಂಬಂಧವಿತ್ತು. ಈ ಸಂಬಂಧಕ್ಕೆ ಪತಿ ಅಡ್ಡಿಯಾಗಿದ್ದ ಕಾರಣ ಆತ ರಾತ್ರಿ ಮಲಗಿದ್ದ ವೇಳೆ ಪ್ರಿಯಕರನ ಸಹಾಯದಿಂದ ಪತ್ನಿ ಬಟ್ಟೆಯಿಂದ ಪತಿಯ ಕುತ್ತಿಗೆಗೆ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಈ ಬಗ್ಗೆ ಗದಗ ಜಿಲ್ಲೆ ಮುಳುಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ.