ಮಲಗಿದ್ದ ಪತಿಯ ಮುಖಕ್ಕೆ ಕುದಿವ ಎಣ್ಣೆ ಸುರಿದ ಪತ್ನಿ

ಸೋಮವಾರ, 10 ಫೆಬ್ರವರಿ 2020 (09:45 IST)
ಬೆಂಗಳೂರು: ಮಾನಸಿಕ, ದೈಹಿಕ ಹಿಂಸೆ ನೀಡುತ್ತಿದ್ದ ಪಟಿಯ ಕಾಟ ತಾಳಲಾರದೆ ಪತ್ನಿ ಆತನ ಮುಖಕ್ಕೆ ಕುದಿಯುವ ಎಣ್ಣೆ ಸುರಿದ ಘಟನೆ ನಗರದಲ್ಲಿ ನಡೆದಿದೆ.
 


ಅಕ್ರಮ ಸಂಬಂಧ ಹೊಂದಿದ್ದ ಪತಿ ಮಂಜುನಾಥ್ ಪ್ರತಿನಿತ್ಯ ಪತ್ನಿ ಪದ್ಮಾಗೆ ಹಿಂಸೆ ನೀಡುತ್ತಿದ್ದ. ಹೀಗಾಗಿ ಆತನ ಕಾಟದಿಂದ ಮುಕ್ತಿ ಪಡೆಯಲು ಬೆಳಗ್ಗಿನ ಹೊತ್ತು ಮಲಗಿದ್ದ ಪತಿಯ ಮುಖಕ್ಕೆ ಮುಕ್ಕಾಲು ಲೀ. ಕುದಿಯುವ ಎಣ್ಣೆ ಸುರಿದಿದ್ದಾಳೆ.

ಇದೀಗ ಮಂಜುನಾಥ್ ತೀವ್ರ ಸುಟ್ಟ ಗಾಯಗಳಿಂದಾಗಿ ಆಸ್ಪತ್ರೆ ಸೇರಿದ್ದು, ಪತ್ನಿ ಪದ್ಮಾಳನ್ನು ಬಂಧಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ