ಪತ್ನಿ ಬೇರೊಬ್ಬನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಳು. ಈ ವಿಷಯ ಗಂಡ ತಿಳಿದುಕೊಂಡಿದ್ದೇ ಆತನ ಸಾವಿಗೆ ಕಾರಣವಾಗಿದೆ.
ಪತ್ನಿ ಪಪ್ಪು ದೇವಿ ಎಂಬಾಕೆ ತನ್ನ ಪ್ರಿಯಕರ ಹನುಮಾನ್ ರಾಮ ಜೊತೆ ಸೇರಿಕೊಂಡು ಪತಿ ಮನ್ ರಾಮ್ ನನ್ನು ಕೊಲೆ ಮಾಡಿದ್ದಾಳೆ.
ನಿದ್ರೆ ಬರುವ ಮಾತ್ರೆ ಕೊಟ್ಟು ಗಂಡ ಮಲಗಿದ್ದಾಗ ಆತನ ಕಾಲಿಗೆ ಕರೆಂಟ್ ಕೊಟ್ಟು ಕೊಲೆ ಮಾಡಿದ್ದಾಳೆ. ಆ ಬಳಿಕ ಗಂಡನ ಮನೆಯವರಿಗೆ ಬೇರೆ ಬೇರೆ ಹೇಳಿಕೆ ನೀಡಿ ಸಿಕ್ಕಿಬಿದ್ದಿದ್ದಾಳೆ.
ಮೃತನ ಕುಟುಂಬದವರು ಪಪ್ಪು ದೇವಿ ಹಾಗೂ ಆಕೆಯ ಪ್ರಿಯಕರ ಹನುಮಾನ್ ರಾಮ್ ನನ್ನು ಬಂಧನ ಮಾಡಿದ್ದಾರೆ.
ರಾಜಸ್ಥಾನದ ಬಾರ್ಮರ್ ಜಿಲ್ಲಾ ವ್ಯಾಪ್ತಿಯಲ್ಲಿ ಈ ಕೊಲೆ ಘಟನೆ ನಡೆದಿದೆ.