ಸಿನಿಮಾ ಸ್ಟೈಲ್ ನಲ್ಲಿ ಲವರ್ ಜೊತೆ ಸೇರಿ ಗಂಡನ ಕೊಂದ ಪತ್ನಿ

ಶನಿವಾರ, 27 ಜೂನ್ 2020 (16:35 IST)
ಅಕ್ರಮ ಸಂಬಂಧ ಹೊಂದಿದ್ದ ಪತ್ನಿಯೊಬ್ಬಳು ಲವರ್ ಜೊತೆ ಸೇರಿ ಪತಿಯನ್ನು ಕೊಲೆ ಮಾಡಿದ ಘಟನೆ ನಡೆದಿದೆ.

ಶಾರದಾ ಹಾಗೂ ಬಾಬು ಅಕ್ರಮ ಸಂಬಂಧ ಹೊಂದಿದ್ದರು. ಆದರೆ ಶಾರದಾ ಗಂಡ ಆನಂದ ಇವರ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದನು. ಅಲ್ಲದೇ ಕುಡಿದು ಬಂದು ನಿತ್ಯವೂ ಶಾರದಾಳಿಗೆ ಕಿರುಕುಳ ಕೊಡುತ್ತಿದ್ದ.

ಹೀಗಾಗಿ ಸಿನಿಮಾ ಸ್ಟೈಲ್ ನಲ್ಲಿ ಪ್ರಿಯಕರ ಬಾಬು ಜೊತೆ ಸೇರಿದ ಶಾರದಾ ತನ್ನ ಗಂಡ ಆನಂದನನ್ನು ಕೊಲೆ ಮಾಡಿದ್ದಾಳೆ. ಆ ಬಳಿಕ ಅಪಘಾತವಾದಂತೆ ಸನ್ನಿವೇಶ ನಿರ್ಮಾಣ ಮಾಡಿದ್ದರು.

ಆದರೆ ತನಿಖೆಗೆ ಇಳಿದ ಪೊಲೀಸರಿಗೆ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಮೈಸೂರಿನ ಸಾಲಿಗ್ರಾಮದಲ್ಲಿ ಘಟನೆ ನಡೆದಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ