ಒಂದು ವೇಳೆ ಆಫ್ ಲೈನ್ ಸಾಧ್ಯವಿಲ್ಲದಿದ್ದರೆ ಸುಲಭವಾಗಿ ಆನ್ ಲೈನ್ ಮುಖಾಂತರವೂ ತಿದ್ದುಪಡಿ ಮಾಡಿಕೊಳ್ಳಬಹುದು. ಇದಕ್ಕಾಗಿ
https://ssup.uidai.gov.in/ssup/ ವೆಬ್ ಸೈಟ್ ಗೆ ಲಾಗಿನ್ ಆಗಬೇಕು. ಆಧಾರ್ ವಿಳಾಸ ನವೀಕರಿಸಿ ಆಯ್ಕೆ ಕ್ಲಿಕ್ ಮಾಡಿ. ನವೀಕರಿಸಲು ಸ್ಕ್ಯಾನ್ ಮಾಡಿದ ನಿಮ್ಮ ಮೂಲ ಪೋಷಕ ದಾಖಲೆಗಳನ್ನು ಅಪ್ ಲೋಡ್ ಮಾಡಬೇಕಾಗುತ್ತದೆ. ಡೆಬಿಟ್/ಕ್ರೆಡಿಟ್ ಅಥವಾ ನೆಟ್ ಬ್ಯಾಂಕಿಂಗ್ ಮುಖಾಂತರ 50 ರೂ.ಗಳ ಶುಲ್ಕ ಪಾವತಿ ಮಾಡಬೇಕು. ನಿಮಗೆ ಒಂದು ಸೇವಾ ವಿನಂತಿಯ ಸಂಖ್ಯೆಯನ್ನು ನೀಡಲಾಗುತ್ತದೆ.ಇದನ್ನು ಬಳಸಿ ನಿಮ್ಮ ಅರ್ಜಿಯ ಸ್ಟೇಟಸ್ ವೀಕ್ಷಿಸಬಹುದಾಗಿದೆ. ನವೀಕರಿಸಿದ ಕಾಪಿ ಸಿಗಲು 30 ದಿನ ಬೇಕಾಗುತ್ತದೆ. ನವೀಕರಿಸಿದ ಬಳಿಕ ಹೊಸದಾಗಿ ಆಧಾರ್ ಕಾರ್ಡ್ ಡೌನ್ ಲೋಡ್ ಮಾಡಿಕೊಳ್ಳಬೇಕು.