ಸಿದ್ದರಾಮಯ್ಯ ಸಿಎಂ ಆಗಲೇಬೇಕು ಎಂದೋರಾರು?

ಭಾನುವಾರ, 12 ಮೇ 2019 (13:37 IST)
ನಾನು ಲೋಕಸಭಾ ಚುನಾವಣೆಯಲ್ಲಿ ನಾನು ತಟಸ್ಥವಾಗಿದ್ದೆ. ಯಾರ ಪರವೂ ನಾನು ಕೆಲಸ ಮಾಡಿಲ್ಲ. ನಾನು ನಮ್ಮ ಪಕ್ಷದ ನಾಯಕರಿಗೆ ತಟಸ್ಥವಾಗಿರುವ ಬಗ್ಗೆ ಸ್ಪಷ್ಟಪಡಿಸಿದ್ದೆ ಅಂತ ಕೈ ಪಡೆ ಮುಖಂಡ ಹೇಳಿದ್ದಾರೆ.

ಮಂಡ್ಯದ ಮಳವಳ್ಳಿಯಲ್ಲಿ ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಪಿ.ಎಂ.ನರೇಂದ್ರಸ್ವಾಮಿ ಹೇಳಿಕೆ ನೀಡಿದ್ದು, ನಾನು ತಟಸ್ಥವಾಗಿರುವ ವಿಚಾರವನ್ನು ಚುನಾವಣೆ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್ ಗೆ ತಿಳಿಸಿದ್ದೆ. ನನಗೆ ಹಿಡಿಸದ, ಉಸಿರುಗಟ್ಟುವ ವಾತಾವರಣದಲ್ಲಿ ನಾನು ಇರಲ್ಲ. ಮಳವಳ್ಳಿ ಕ್ಷೇತ್ರದ ಕಾಂಗ್ರೆಸ್ಸಿಗರ ಧ್ವನಿಯಾಗಿ ನಾನಿದ್ದೆ. ನಾನು ಇನ್ನೊಂದು ಪಕ್ಷದ ಧ್ವನಿಯಾಗಲ್ಲ ಎಂದರು.

ನಾನು ಸುಮಲತಾ ಪರ ಯಾವ ವೇದಿಕೆಯಲ್ಲೂ ಕಾಣಿಸಿಕೊಂಡಿಲ್ಲ. ಪಕ್ಷದ ತೀರ್ಮಾನಕ್ಕೆ ನಾನು ಬದ್ಧವಾಗಿರದೇ ಇರೋದಕ್ಕೆ ನಾಯಕರಿಗೆ ಮನವರಿಕೆ ಮಾಡಿಕೊಟ್ಟಿದ್ದೆ ಎಂದರು.

ನಮಗೆ ಜೆಡಿಎಸ್ ಪರ ಚುನಾವಣೆ ಮಾಡಲು ಇಚ್ಛೇ ಇರಲಿಲ್ಲ. ಅದಕ್ಕಾಗಿ ತಟಸ್ಥವಾಗಿದ್ದೆ ಎಂದರು.  

ಸುಮಲತಾ ಅಂಬರೀಶ್ ಜೊತೆ ಡಿನ್ನರ್ ವಿಚಾರ ಕುರಿತು ಮಾತನಾಡಿದ ಅವರು, ಯಾವುದೇ ಬರ್ತಡೇ ಪಾರ್ಟಿಗೆ ತೆರಳಿದ್ದಾಗ ನಾವು ಸುಮಲತಾ ಮುಖಾಮುಖಿ ಆಗಿದ್ವಿ. ಎಲ್ಲದಕ್ಕೂ ಉತ್ತರ ಕೊಡೋಕೆ ಆಗಲ್ಲ. ಸುಮಲತಾ ಪರ ಸಿದ್ದರಾಮಯ್ಯ ಇರಲಿಲ್ಲ. ಹಿಂಬಾಗಿಲ ರಾಜಕಾರಣ ಮಾಡುವ ಜಾಯಮಾನ ಅವರದ್ದಲ್ಲ ಎಂದರು.

ಜೆಡಿಎಸ್ ನವ್ರಿಗೆ ಅಧಿಕಾರ ಬಿಟ್ಟುಕೊಟ್ಟಿದ್ದೇವೆ. ಅಭಿವೃದ್ಧಿ ಮಾಡೋ ಬದಲು ನಮ್ಮ ಹಿಂದಿನ ಯೋಜನೆಯನ್ನು ತಡೆಯುತ್ತಿದ್ದಾರೆ. ಜೆಡಿಎಸ್ ಪಕ್ಷದಿಂದ ನಮಗೆ ನಿರಂತರ ನೋವಾಗ್ತಿದೆ. ಈ ಬಗ್ಗೆ ನಾನು ನಮ್ಮ ನಾಯಕರೊಂದಿಗೆ ಚರ್ಚೆ ಮಾಡ್ತೀನಿ ಎಂದ್ರು.
ಅಭಿವೃದ್ಧಿ ದೃಷ್ಟಿಯಿಂದ, ಸಾರ್ವಜನಿಕರ ಒತ್ತಾಯ ಇದೆ. ಜನಾಭಿಪ್ರಾಯ ಸಹ ಇರೋದ್ರಿಂದ ಸಿದ್ದರಾಮಯ್ಯ ಮತ್ತೆ ಸಿಎಂ ಆಗಬೇಕು ಅಂತ ಹೇಳಿದ್ರು.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ