ಸಿದ್ದರಾಮಯ್ಯ ವಿರುದ್ಧದ ಕೇಸ್; ಜನಪ್ರತಿನಿಧಿಗಳ ಕೋರ್ಟ್ ಗೆ ಶಿಫ್ಟ್

ಶನಿವಾರ, 11 ಮೇ 2019 (19:30 IST)
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮೈಸೂರಿನಲ್ಲಿ ದಾಖಲಾಗಿದ್ದ ಪ್ರಕರಣ ವಿಚಾರಣೆ ಬೆಂಗಳೂರಿನ ಜನಪ್ರತಿನಿಧಿಗಳ ಕೋರ್ಟ್ ಗೆ ಶಿಫ್ಟ್ ಆಗಿದೆ.

ಅಕ್ರಮ ಭೂ ಒತ್ತುವರಿ, ಸರ್ಕಾರಿ ಅಧಿಕಾರ ದುರ್ಬಳಕೆ ಆರೋಪದಡಿ ದಾಖಲಾಗಿದೆ ದೂರು. ಮೈಸೂರು ಕೋರ್ಟ್ ನಿಂದ ಬೆಂಗಳೂರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಪ್ರಕರಣದ ವಿಚಾರಣೆ ವರ್ಗಾವಣೆಯಾಗಿದೆ.

ನಾಗರಿಕ ಹಿರಿಯ ನ್ಯಾಯಾಧೀಶ, ಸಿಜೆಎಂ ಯಶವಂತ‌ ಕುಮಾರ್ ‌ರಿಂದ ಮಹತ್ವದ ಆದೇಶ ಹೊರಡಿಸಲಾಗಿದೆ.

ಸಿದ್ದರಾಮಯ್ಯ, ಮಾಜಿ ಸಿಎಂ, ಬಾದಾಮಿ‌ ಕ್ಷೇತ್ರದ ಹಾಲಿ‌ ಶಾಸಕ‌ರಾಗಿದ್ದಾರೆ. ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರೂ ಹೌದು.

ಮೈಸೂರು ಹಿನಕಲ್ ಪಂಚಾಯ್ತಿ‌ ವ್ಯಾಪ್ತಿಯಲ್ಲಿ ಅಕ್ರಮ ಭೂ ಸ್ವಾಧೀನ ಆರೋಪ ಮಾಡಿಕೊಂಡಿದ್ದಾರೆ ಎಂಬ ಆರೋಪವಿದೆ.
ಸಾಕಮ್ಮ ಎಂಬುವವರಿಂದ ಸರ್ವೇ ನಂ. 70/4 ಖರೀದಿಸಿ ಬಳಿಕ ಹೆಚ್ಚುವರಿಯಾಗಿ ಮುಡಾ ಭೂಮಿ ‌ಕಬಳಿಕೆ ಆರೋಪ
ಸಿದ್ದರಾಮಯ್ಯರ ಮೇಲಿದೆ. ಅಂದಿನ  ಅಧ್ಯಕ್ಷ ಸಿ. ಬಸವೇಗೌಡ, ಅಂದಿನ‌ ಮುಡಾ ಆಯುಕ್ತ ಧ್ರುವಕುಮಾರ್ , ಸದ್ಯ ಮುಡಾ ಆಯುಕ್ತ ಪಿ. ಎಸ್. ಕಾಂತರಾಜ್ ವಿರುದ್ಧ ದೂರು ದಾಖಲಾಗಿದೆ.

ಸಾಮಾಜಿಕ ಕಾರ್ಯಕರ್ತ ಗಂಗರಾಜು ಎಂಬುವರು ಲಕ್ಷ್ಮೀಪುರ ಠಾಣೆಯಲ್ಲಿ ನೀಡಿದ್ದ ದೂರು ಇದಾಗಿದೆ. ಜೂನ್ 10 ರಂದು‌ ವಿಶೇಷ ನ್ಯಾಯಾಲಯದಲ್ಲಿ‌ ಮತ್ತೆ ಬಾಕಿ ದಾಖಲಾತಿಗಳ‌ ಪರಿಶೀಲನೆ ನಡೆಯಲಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ