ಸಿದ್ದರಾಮಯ್ಯ ಮೊದಲು ಬೇರೆಯವರಿಗೆ ಸಿಎಂ ಆಗುವ ಭಾಗ್ಯ ಕೊಡ್ತಾರಾ..??- ರವಿಕುಮಾರ್

ಸೋಮವಾರ, 24 ಜುಲೈ 2023 (15:02 IST)
ಡಿಕೆಶಿ ಆಪರೇಷನ್ ಹೇಳಿಕೆಗೆ‌  ಎಂಎಲ್ ಸಿ ರವಿಕುಮಾರ್ ತಿರುಗೇಟು ನೀಡಿದ್ದಾರೆ.ಡಿಕೆಶಿ, ಸಿದ್ದರಾಮಯ್ತ ಅವರನ್ನ ಕೇಳ್ತೇನೆ.ಹಿಂದುಳಿದ ನಾಯಕ ಅಂದ್ರೆ ಸಿದ್ದರಾಮಯ್ಯ ಒಬ್ಬರೇನಾ..?ಬಿಕೆ ಹರಿ ಪ್ರಸಾದ್ ರಾಷ್ಟ್ರದ ಪ್ರಧಾನ ಕಾರ್ಯದರ್ಶಿ ಆಗಿ‌ಕೆಲಸ ಮಾಡಿದ್ದಾರೆ.ಪರಿಷತ್ ನಲ್ಲಿ ‌ವಿಪಕ್ಣ‌ ನಾಯಕನಾಗಿ‌ಕೆಲಸ ಮಾಡಿದ್ದಾರೆ.ಅವರನ್ನ ಸಾಮಾನ್ಯ ವ್ಯಕ್ತಿಯಂತೆ ನೋಡ್ತಿದಾರೆ.ನಮಗೆ ಸಿಎಂ ಆಗೋಕೆ‌ ಅವಕಾಶ ಇಲ್ಲ ಅಂತಾ ಅನೇಕ ನಾಯಕರೂ ಹೇಳ್ತಿದಾರೆ.ಹರಿಪ್ರಸಾದ್  ಅವರನ್ನ ಸಾಮಾನ್ಯ ವ್ಯಕ್ತಿಯಂತೆ ನೋಡ್ತಿದಾರೆ.
 
ಅಲ್ಲದೇ ನಾನು‌ಕೇಳ್ತೇನೆ?ಸಿದ್ದರಾಮಯ್ಯ ಅವರಿಂದ ಪಾರ್ಟಿಗೆ‌ ಕಾಂಟ್ರಿಬೂಷನ್ ಏನು?ಅವರ‌ ಬಂದಮೇಲೆ ಅನೇಕ ಮಂದಿಗೆ ಮಂತ್ರಿ ಸ್ಥಾನ ಮಿಸ್‌ಆಯ್ತ.ಕುಮಾರಸ್ವಾಮಿ ಅಲ್ಲಿ ಹೋಗಿ ಸರ್ಕಾರ ಬೀಳಿಸ್ತಾರೆ‌ ಅಂದ್ರೆ ನಾನು‌ ನಂಬೋದಿಲ್ಲ.ಬಿಕೆ ಹರಿಪ್ರಸಾದ್‌ಗೆ ಮಂತ್ರಿ‌ಭಾಗ್ಯ‌ ಕೊಡ್ತಾರಾ? ಸಿದ್ದರಾಮಯ್ಯ ಅವರು.ಮೊದಲು ಬಿ.ಕೆ ಹರಿಪ್ರಸಾದ್ ಗೆ ಆದಂತಹ ಸಮಸ್ಯೆ ಬಗೆಹರಿಸಿ.ಸಿದ್ದರಾಮಯ್ಯ ಮೊದಲು ಬೇರೆಯವರಿಗೆ ಸಿಎಂ ಆಗುವ ಭಾಗ್ಯ ಕೊಡ್ತಾರಾ..??ಬಿ‌.ಕೆ ಹರಿಪ್ರಸಾದ್ ಗೆ ಮಂತ್ರಿ ಭಾಗ್ಯ ಕೊಡ್ತಾರಾ..?ಇದಕ್ಕೆ ಮೊದಲು ಡಿಸಿಎಂ ಡಿ.ಕೆ ಶಿವಕುಮಾರ್ ಉತ್ತರ ಕೊಡ್ಲಿ ಅಂತಾ ಎಂ ಎಲ್ ಸಿ ರವಿಕುಮಾರ್ ಡಿಕೆಶಿ,ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ