ನೌಕರರ ಹತ್ಯೆ ಮಾಡುವುದಾಗಿ ವಿಪ್ರೋ ಸಂಸ್ಥೆಗೆ ಬೆದರಿಕೆಯ ಇ-ಮೇಲ್

ಶನಿವಾರ, 6 ಮೇ 2017 (12:09 IST)
ದೇಶದ ಸಾಫ್ಟ್‌ವೇರ್ ಕ್ಷೇತ್ರದಲ್ಲಿ ದಿಗ್ಗಜ ಕಂಪೆನಿಯಾದ ವಿಪ್ರೋ ಸಂಸ್ಥೆಗೆ ಬೆದರಿಕೆಯ ಇ-ಮೇಲ್ ಬಂದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 
500 ಕೋಟಿ ರೂಪಾಯಿ ಹಣವನ್ನು ನೀಡದಿದ್ದಲ್ಲಿ ಕಂಪೆನಿಯ ನೌಕರರನ್ನು ಹತ್ಯೆ ಮಾಡುವುದಾಗಿ ಇ-ಮೇಲ್‌ನಲ್ಲಿ ಬೆದರಿಕೆ ಹಾಕಲಾಗಿದೆ. ದ್ರೋಣ್ ಕ್ಯಾಮರಾ ಮೂಲಕ ರಿಸಿನ್ ಎನ್ನುವ ವಿಷವನ್ನು ಸಿಂಪಡಿಸಿ ನೌಕರರನ್ನು ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ.
 
500 ಕೋಟಿ ರೂಪಾಯಿ ಹಣವನ್ನು ಬಟನ್‌ಕಾಯಿನ್ ಮೂಲಕ ವರ್ಗಾಯಿಸುವಂತೆ ಕೂಡಾ ಇ-ಮೇಲ್‌ನಲ್ಲಿ ತಿಳಿಸಲಾಗಿದೆ.
 
ಬೆದರಿಕೆಯ ಇ-ಮೇಲ್ ಕುರಿತಂತೆ ವಿಪ್ರೋ ಸಂಸ್ಥೆಯ ಅಧಿಕಾರಿಗಳು ಸರ್ಜಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ಸ್ವೀಕರಿಸಿದ ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.   
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ