ತಾಯಿಯನ್ನೇ ಕೊಲೆ ಮಾಡಿ ಪ್ರಿಯಕರನ ಜೊತೆ ರೋಮ್ಯಾನ್ಸ್ ಮಾಡುತ್ತಿದ್ದ ಯುವತಿ ಬಂಧನ
ಯಾವುದೋ ಆಮಿಷಕ್ಕೆ ಒಳಗಾಗಿ ಜನ್ಮ ನೀಡಿದವಳನ್ನೇ ಕೊಲೆ ಮಾಡಿ ಪರಾರಿಯಾಗಿದ್ದ ಪ್ರೇಮಿಗಳನ್ನು ಪೊಲೀಸರು ಬಂಧನ ಮಾಡಿದ್ದಾರೆ.
ಲವರ್ ಜೊತೆ ಬಿಂದಾಸ್ ಆಗಿ ಲೈಫ್ ಕಳೆಯಬೇಕು ಅಂತ ನಾಲ್ಕೈದು ತಿಂಗಳ ಹಿಂದೆಯೇ ಸ್ಕೆಚ್ ಹಾಕಲಾಗಿತ್ತು. ಕಳೆದ ವಾರ ಹೆತ್ತ ತಾಯಿಯನ್ನೇ ಅಮೃತಾ ಕೊಲೆ ಮಾಡಿ, ಆ ಬಳಿಕ ಪ್ರಿಯಕರನೊಂದಿಗೆ ಅಂಡಮಾನ್ ಹೋಗಿ ಮಜಾ ಮಾಡುತ್ತಿದ್ದಳು.
ಆರೋಪಿಗಳನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದು, ಕೊಲೆಯಲ್ಲಿ ಪ್ರಿಯಕರನ ಪಾತ್ರ ಇದೆಯಾ ಅನ್ನೋದನ್ನು ಪತ್ತೆ ಹಚ್ಚುತ್ತಿದ್ದಾರೆ.