ಮಹಿಳೆಯರಿಗೆ ನಿಂದಿಸಿದ ಕಾಂಗ್ರೆಸ್ ಲೀಡರ್‌ಗೆ ಚಪ್ಪಲಿ ಸೇವೆ
ಭಾನುವಾರ, 16 ಏಪ್ರಿಲ್ 2017 (16:09 IST)
ಕುಡಿದ ಮತ್ತಲ್ಲಿ ಮಹಿಳೆಯರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಮಾಜಿ ಶಾಸಕರ ಆಪ್ತನೊಬ್ಬನಿಗೆ ಮಹಿಳೆಯರೇ ಗೂಸಾ ನೀಡಿದ ಘಟನೆ ವರದಿಯಾಗಿದೆ.
ಚಿಕ್ಕೋಡಿ ತಾಲೂಕಿನ ಹಾರುರಗೇರಿ ಪಟ್ಟಣದ ದಾಸರ ಕಾಲೋನಿಯಲ್ಲಿ ಘಟನೆ ನಡೆದಿದೆ. ಕಾಂಗ್ರೆಸ್ ನಾಯಕ ರಾಜು ಕುರಿ ಎಂಬಾತ ರಾತ್ರಿ ಹೊತ್ತು ಮದ್ಯ ಸೇವಿಸಿ ಮಹಿಳೆಯರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಮಾರನೇ ದಿನ ಆತನ ವರ್ತನೆಯ ಬಗ್ಗೆ ಮಹಿಳೆಯರು ಕೇಳಲು ಹೋದಾಗ ಮತ್ತೆ ಅಸಭ್ಯ ಪದಗಳನ್ನು ಬಳಸಿದ್ದಾನೆ ಎನ್ನಲಾಗಿದೆ.
ಇದರಿಂದ ಆಕ್ರೋಶಗೊಂಡ ಮಹಿಳೆಯರು, ಸ್ಥಳೀಯರು, ರಾಜು ಕುರಿಯ ಮೇಲೆ ರಸ್ತೆಯಲ್ಲಿಯೇ ಹಲ್ಲೆ ಮಾಡುತ್ತಾ ಹಾರುರಗೇರಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಒಪ್ಪಿಸಿದ್ದಾರೆ.
ಆರೋಪಿ ರಾಜು ಕುರಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.