ತಲೆಗೂದಲು ಉದುರುತ್ತದೆಂಬ ಬೇಸರಕ್ಕೆ ನೇಣು ಬಿಗಿದುಕೊಂಡ ಯುವತಿ
ತಲೆಗೂದಲು ಎನ್ನುವುದು ಹೆಣ್ಣಿಗೆ ಶೋಭೆಯ ವಿಚಾರ. ಆದರೆ ಈ ಯುವತಿ ಅದನ್ನೇ ಗಂಭೀರವಾಗಿ ತೆಗೆದುಕೊಂಡಿದ್ದಳು. ಅನಾರೋಗ್ಯದಿಂದ ಬಳಲುತ್ತಿದ್ದ ಯುವತಿಗೆ ನಿರಂತರವಾಗಿ ಕೂದಲು ಉದುರುತ್ತಿತ್ತು. ಇದಕ್ಕೆ ಎಷ್ಟೇ ಚಿಕಿತ್ಸೆ ಪಡೆದರೂ ಫಲಕಾರಿಯಾಗಿರಲಿಲ್ಲ.
ಇದರಿಂದ ಬೇಸತ್ತ ಯುವತಿ ಮನೆಯಲ್ಲಿಯೇ ನೇಣಿಗೆ ಶರಣಾಗಿದ್ದಾಳೆ. ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.