ಗೋಣಿ ಚೀಲಕ್ಕೆ ಜುಟ್ಟು ಹಿಡಿದು ಮಚ್ಚಿನಿಂದ ಕಿತ್ತಾಡಿದ ಮಹಿಳೆಯರು
ತಮ್ಮ ಮನೆಯ ತುಳಸಿಕಟ್ಟೆಯ ಬಳಿ ಗೋಣಿ ಚೀಲ ಒಣಗಲು ಹಾಕಿದ್ದಕ್ಕೆ ಮಹಿಳೆ ಪಕ್ಕದ ಮನೆಯ ಮಹಿಳೆಗೆ ಆಕ್ಷೇಪಿಸಿ ತೆಗೆಯುವಂತೆ ಹೇಳಿದ್ದಾಳೆ. ಈ ವಿಚಾರ ಇಬ್ಬರ ನಡುವೆ ವಾಗ್ವಾದಕ್ಕೆ ಕಾರಣವಾಗಿದೆ.
ಕೊನೆಗೆ ಗೋಣಿ ಚೀಲ ತೆಗೆಯಲು ಹೇಳಿದ ಮಹಿಳೆಗೆ ಪಕ್ಕದ ಮನೆ ಮಹಿಳೆ ಮಚ್ಚಿನಿಂದ ಹಲ್ಲೆ ನಡೆಸಿದ್ದಾಳೆ. ಇದರಿಂದ ಮಹಿಳೆಗೆ ತೀವ್ರ ಗಾಯವಾಗಿದೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎನ್ನಲಾಗಿದೆ.