ಅಮೆಜಾನ್`ಗೆ 70 ಲಕ್ಷ ರೂ. ನಾಮ ಹಾಕಿದ್ದ ಮಹಿಳೆ ಅರೆಸ್ಟ್..!

ಬುಧವಾರ, 10 ಮೇ 2017 (13:28 IST)
ಪ್ರತಿಷ್ಠಿತ ಆನ್ ಲೈನ್ ಶಾಪಿಂಗ್ ಸಂಸ್ಥೆ ಅಮೇಜಾನ್`ಗೆ 70 ಲಕ್ಷ ರೂ. ನಾಮ ಹಾಕಿದ್ದ 32 ವರ್ಷದ ಮಹಿಳೆಯನ್ನ ಬೆಂಗಳೂರಿನಲ್ಲಿ ಬಂಧಿಸಲಾಗಿದೆ. ಬಂಧಿತ ಮಹಿಳೆಯನ್ನ ಪಶ್ಚಿಮ ಬಂಗಾಳ ಮೂಲದ ಇಂಜಿನಿಯರಿಂಗ್ ಪದವಿಧರೆ ದೀಪನ್ವಿತಾ ಘೋಷ್ ಎಂದು ಗುರ್ತಿಸಲಾಗಿದೆ.
 

ಅಮೆಜಾನ್`ನಲ್ಲಿ 69.91 ಲಕ್ಷದಷ್ಟು ವಸ್ತುಗಳನ್ನ ಖರೀದಿಸಿದ್ದ ಮಹಿಳೆ ಬಳಿಕ ಅದೇ ವಸ್ತುಗಳನ್ನ ಹೋಲುವ ಕಡಿಮೆ ಬೆಲೆಯ ನಕಲಿ ವಸ್ತುಗಳನ್ನ ಬೇರೊಂದು ವೆಬ್ ಸೈಟ್ ಮೂಲಕ ಖರೀದಿಸಿದ್ದಳು. ಬಳಿಕ ನಿಮ್ಮ ವಸ್ತುಗಳು ಸರಿ ಇಲ್ಲ ಎಂದು ಅಮೆಜಾನ್`ಗೆ ನಕಲಿ ವಸ್ತುಗಳನ್ನ ಹಿಂದಿರುಗಿಸಿ ಲಕ್ಷ ಲಕ್ಷ ನಾಮ ಹಾಕಿದ್ದಳು ಎಂದು ಆರೋಪ ಕೇಳಿಬಂದಿದೆ.

ಪ್ರೊಫೆಶನಲ್ ಸರ್ವಿಸಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಈ ಮಹಿಳೆ ಹೊರಮಾವುವಿನ ಅಗರದಲ್ಲಿ ಪತಿ ಜೊತೆ ವಾಸವಿದ್ದಳು. ಏಪ್ರಿಲ್ 18ರಂದು ವಂಚನೆ ಕುರಿತಂತೆ ಅಮೇಜಾನ್ ಪ್ರತಿನಿಧಿ ಡೆನು ಟಿ ನಾಯರ್ ಹೆಣ್ಣೂರ ಪೊಲೀಸರಿಗೆ ದೂರು ನೀಡಿದ್ದರು. ಮಹಿಳೆ ನಕಲಿ ಹೆಸರುಗಳನ್ನ ಬಳಸಿ 104 ವಸ್ತುಗಳನ್ನ ಖರೀದಿಸಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ