ಸೊಪ್ಪಿನ ಉಡುಪು ಧರಿಸಿದ ಮಹಿಳೆಯರು

ಶನಿವಾರ, 21 ಮಾರ್ಚ್ 2020 (17:56 IST)
ಮಹಾಮಾರಿ ಕೊರೊನಾ ವೈರಸ್ ಭೀತಿಯ ನಡುವೆಯೂ ಮಹಿಳೆಯರು ಸೊಪ್ಪಿನ ಉಡುಪು ಧರಿಸಿ ಜಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ.


ಸರ್ಕಾರದ ನಿಷೇಧಾಜ್ಞೆ ನಡುವೆಯೂ ಜಾತ್ರೆ ನಡೆದಿದ್ದು, ಮಹಿಳೆಯರು ಸೊಪ್ಪಿನ ಉಡುಪು ಧರಿಸಿ ಮೌಢ್ಯಾಚರಣೆ ಮಾಡಿದ್ದಾರೆ.
ಬಾಯಿ ಬೀಗ ಹಾಕಿಕೊಂಡು ಸೊಪ್ಪಿನ ಸೇವೆ ಮಾಡಿರುವ ಮಹಿಳೆಯರ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಬೀಸನಹಳ್ಳಿ ಗ್ರಾಮದಲ್ಲಿ ನಡೆದಿರುವ ಜಾತ್ರೆಯಲ್ಲಿ ಈ ಅಮಾನವೀಯ ಪದ್ಧತಿ ಆಚರಣೆಯಾಗಿದೆ.

ಕೊರೊನಾ ಭೀತಿ, ನಿಷೇಧಾಜ್ಞೆ, ಮೌಢ್ಯ ಪ್ರತಿಬಂಧಕ ಕಾಯ್ದೆ ಉಲ್ಲಂಘಿಸಿರುವ ಗ್ರಾಮಸ್ಥರ ವಿರುದ್ಧ ಜಿಲ್ಲಾಡಳಿತ ಯಾವ ಕ್ರಮ ಕೈಗೊಳ್ಳಲಿದೆ ಅನ್ನೋ ಕುತೂಹಲ ಮೂಡಿಸಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ