ಮಹಿಳೆಯರು ಪಾರ್ಟಿಗಳಲ್ಲಿ ಅತ್ಯಾಚಾರಕ್ಕೊಳಗಾಗುತ್ತಾರೆ, ಜಾತ್ರೆಗಳಲ್ಲಿ ಅಲ್ಲ: ಭಾರತಿ ಶಂಕರ್

ಶನಿವಾರ, 7 ಅಕ್ಟೋಬರ್ 2017 (13:43 IST)
ಅನ್‌ವಾಂಟೆಡ್ ಪಾರ್ಟಿಗಳಲ್ಲಿ ಮಹಿಳೆಯರ ಮೇಲೆ ಅತ್ಯಾಚಾರಗಳಾಗುತ್ತವೆಯೇ ಹೊರತು ಜಾತ್ರೆಗಳಲ್ಲಿ ಅಲ್ಲ ಎಂದು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಭಾರತಿ ಶಂಕರ್ ನೀಡಿದ ಹೇಳಿಕೆ ವಿವಾದಕ್ಕೆ ಗುರಿಯಾಗಿದೆ.
ಬಿ.ಪ್ಯಾಕ್ ಮತ್ತು ಬೆಂಗಳೂರು ಸಿಟಿ ಪೋಲಿಸ್ ಆಯೋಜಿಸಿದ 'ಎ ಬಿಲಿಯನ್ ಐಸ್ ಎನ್ನುವ ಅಭಿಯಾನದಲ್ಲಿ ಪಾಲ್ಗೊಂಡು ಮಹಿಳಾ ಸುರಕ್ಷತೆಯ ಬಗ್ಗೆ ಚರ್ಚೆಯಲ್ಲಿ ಅವರು ಮಾತನಾಡುತ್ತಿದ್ದರು. 
 
ಮಹಿಳೆಯರು ಕಿರುಕುಳಕ್ಕೊಳಗಾದಾಗ ಮಧ್ಯಪ್ರವೇಶಿಸಲು ಪ್ರೇಕ್ಷಕರ ಮೇಲೆ ಈ ಪ್ರಚಾರವು ಉತ್ತೇಜನ ನೀಡಲು ಕಾರಣವಾಗುತ್ತದೆ ಎಂದು ತಿಳಿಸಿದ್ದಾರೆ.
 
ಮಹಿಳಾ ಸಬಲೀಕರಣವು ಮಹಿಳಾ ಸುರಕ್ಷತೆಗೆ ಸಮನಾಗಿದೆಯೇ ಎನ್ನುವ ಪ್ರೇಕ್ಷಕರ ಪ್ರಶ್ನೆಗೆ ಉತ್ತರಿಸಿದ ಅವರು. ಮಹಿಳಾ ಸುರಕ್ಷತೆಗಾಗಿ ಕ್ರಮಗಳನ್ನು ಪಟ್ಟಿಮಾಡಿದ ಅವರು, ಮಹಿಳೆಯರು ಜಾತ್ರೆಗೆ ಹೋದಾಗ ಅವರು ಅತ್ಯಾಚಾರಕ್ಕೊಳಗಾಗುತ್ತಾರೆಯೇ? ಅನ್‌ವಾಂಟೆಡ್ ಪಾರ್ಟಿಗಳಲ್ಲಿ ಮಹಿಳೆಯರು ಅತ್ಯಾಚಾರಕ್ಕೊಳಗಾಗುತ್ತಾರೆ ಎಂದು ಹೇಳಿದ್ದಾರೆ.
 
ಮಹಿಳಾ ಅಭಿವೃದ್ಧಿ ನಿಗಮವು ಮಹಿಳಾ ಗುಂಪುಗಳ ನಡುವೆ ನಿರಂತರವಾದ ಆದಾಯವನ್ನು ಉತ್ಪಾದಿಸುವ ಚಟುವಟಿಕೆಗಳನ್ನು ಉತ್ತೇಜಿಸಲು ಕರ್ನಾಟಕ ಸರ್ಕಾರ ಸ್ಥಾಪಿಸಿದೆ ಎಂದು ತಿಳಿಸಿದ್ದಾರೆ.
 
ಸಮಾಜದಲ್ಲಿನ ಸಮಸ್ಯೆಗಳಿಗೆ ಸರಕಾರವನ್ನು ದೂಷಿಸಲು ಸಾಧ್ಯವಿಲ್ಲವೆಂದ ಭಾರತಿ, ಮಹಿಳಾ ಸುರಕ್ಷತೆ ಸಮಸ್ಯೆಗಳನ್ನು ಕಸದ ಪ್ರತ್ಯೇಕತೆಗೆ ಹೋಲಿಸಿದ್ದಾರೆ. "ಕಸದ ಸಮಸ್ಯೆ ಬಗ್ಗೆ ಉತ್ತಮ ನಾಗರಿಕನಾಗಿ ನಾನು ಮೊದಲಿಗೆ ತ್ಯಾಜ್ಯವನ್ನು ಬೇರ್ಪಡಿಸಬೇಕು ನಾನು ಅದನ್ನು ಮಾಡದೆ, ಇಲಾಖೆ ಅಥವಾ ಕಾರ್ಪೊರೇಟರ್ ಅನ್ನು ದೂಷಿಸುತ್ತಿದ್ದಲ್ಲಿ ಯಾವ ಅರ್ಥವಿದೆ ಎಂದು ತಿರುಗೇಟು ನೀಡಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ