ಅನಾಥಾಶ್ರಮದ ಮಕ್ಕಳಿಗೆ ಉಚಿತ ಪಾಸ್ ನೀಡುವ ಮೂಲಕ ಮಕ್ಕಳ ದಿನಾಚರಣೆ ಆಚರಿಸಿದ ವಂಡರ್‌ಲಾ

ಸೋಮವಾರ, 15 ನವೆಂಬರ್ 2021 (19:45 IST)
ಮಕ್ಕಳ ದಿನಾಚರಣೆ ಪ್ರಯುಕ್ತವಾಗಿ ವಂಡರ್‌ಲಾ 600 ಅನಾಥಾಶ್ರಮದ ಮಕ್ಕಳಿಗೆ ಉಚಿತ ಪಾಸ್ ನೀಡುವ ಮೂಲಕ ಅರ್ಥಪೂರ್ಣವಾಗಿ ಮಕ್ಕಳ ದಿನಾಚರಣೆಯನ್ನು ಆಚರಿಸಿತು.
 
ಈ ಕುರಿತು ಮಾತನಾಡಿದ ವಂಡರ್‌ಲಾ ಹಾಲಿಡೇಸ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಅರುಣ್ ಕೆ. ಚಿಟ್ಟಿಲಪಿಲ್ಲಿ, ವಂಡರ್‌ಲಾ ಮಕ್ಕಳ ದಿನಾಚರಣೆಯನ್ನು ವಿಶೇಷವಾಗಿ ಆಚರಿಸುವ ನಿಟ್ಟಿನಲ್ಲಿ ಅನಾಥಾಶ್ರಮದ ಮಕ್ಕಳಿಗೆ ಉಚಿತ ಪಾಸ್ ನೀಡುವ ಮೂಲಕ ಆ ಮಕ್ಕಳ ಸಂಭ್ರಮಕ್ಕೆ ವೇದಿಕೆ ನೀಡಿತು. 600 ಮಕ್ಕಳಿಗೆ ಉಚಿತ ಪಾಸ್ ನೀಡುವ ಜೊತೆಗೆ ಉಚಿತ ಭೋಜನದ ವ್ಯವಸ್ಥೆ ಹಾಗೂ ವಾಟರ್‌ರೈಡ್ ಉಡುಪನ್ನು ಉಚಿತವಾಗಿ ನೀಡುವ ಮೂಲಕ ಅವರ ಸಂತೋಷಕ್ಕೆ ಇನ್ನಷ್ಟು ಜೊತೆಯಾದೆವು ಎಂದರು.
 
ಮಕ್ಕಳು ವಿವಿಧ ಮನರಂಜನಾ ಗೇಮ್ ಆಡುವ ಜೊತೆಗೆ ಚಿತ್ರಕಲೆ, ಅಡುಗೆ ಸ್ಪರ್ಧೆ ಸೇರಿದಂತೆ ವಿವಿಧ ರೀತಿಯ ಸ್ಪರ್ಧೆಗಳನ್ನು ಏರ್ಪಡಿಸಿ, ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ