ವಿಶ್ವ ಹೃದಯ ದಿನಕ್ಕೆ ಉಚಿತ ಆರೋಗ್ಯ ತಪಾಸಣೆ

ಗುರುವಾರ, 27 ಸೆಪ್ಟಂಬರ್ 2018 (17:07 IST)
ಬೆಂಗಳೂರು: ವಿಶ್ವ ಹೃದಯ ದಿನದ ಅಂಗವಾಗಿ ಇದೇ ೨೯ ರಂದು (ಶನಿವಾರ) ಬಸವೇಶ್ವರ ನಗರದ ಪುಣ್ಯ ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ ಶಿಬಿರವನ್ನು ಏರ್ಪಡಿಸಲಾಗಿದೆ. ಇಸಿಜಿ, ಮಧುಮೇಹ, ಅಧಿಕ ರಕ್ತದೊತ್ತಡ, ಇಎನ್‌ಟಿ, ಮೂಳೆ ರೋಗ, ಕಿಡ್ನಿ ಮತ್ತು ಮೂತ್ರಕೋಶ ಕುರಿತು ಉಚಿತ ಆರೋಗ್ಯ ತಪಾಸಣೆ ಮಾಡಲಾಗುವುದು. ಶನಿವಾರ ಬೆಳಿಗ್ಗೆ ೯ಕ್ಕೆ ಆರಂಭವಾಗುವ ಶಿಬಿರ ಮಧ್ಯಾಹ್ನ ೩ರವರೆಗೆ ನಡೆಯಲಿದೆ.
ಇತ್ತೀಚೆಗೆ ವಯೋಮಾನದ ವ್ಯತ್ಯಾಸವಿಲ್ಲದೇ ಸಣ್ಣ ಪ್ರಾಯದವರನ್ನೂ ಕಾಡುತ್ತಿರುವ ಹೃದಯ ಸಂಬಂಧಿ ಕಾಯಿಲೆಗಳ ಸಂಖ್ಯೆ ಹೆಚ್ಚಿದೆ. ಅದರಲ್ಲೂ ಮೆಟ್ರೊ ನಗರಗಳಲ್ಲಿ ಬದುಕುತ್ತಿರುವವರು ಹೃದಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಿದೆ. ಇದನ್ನು ಎಚ್ಚರಿಸುವ ನಿಟ್ಟಿನಲ್ಲಿ ಈ ಶಿಬಿರ ಹಮ್ಮಿಕೊಳ್ಳಲಾಗಿದೆ’ ಎಂದು ಪುಣ್ಯ ಆಸ್ಪತ್ರೆಯ ಡಾ. ನಾಗರಾಜ್ ತಿಳಿಸಿದ್ದಾರೆ.
 
ಶಿಬಿರದಲ್ಲಿ ಹೆಸರಾಂತ ಕೊಲೊರೆಕ್ಟಲ್ ಸರ್ಜನ್ ಡಾ. ನಾಗರಾಜ್ ಬಿ ಪುಟ್ಟಸ್ವಾಮಿ ಮತ್ತು ಲ್ಯಾಪ್ರೊಸ್ಕೋಪಿಕ್ ಗಯಾನೆಕ್ ಸರ್ಜನ್ ಡಾ.ಪುಣ್ಯವತಿ ಸಿ ನಾಗರಾಜ್ ಅವರು ಹಾಜರಿದ್ದು ರೋಗಿಗಳ ತಪಾಸಣೆ ಮಾಡಲಿದ್ದಾರೆ. 
 
ಹೃದಯದ ಆರೋಗ್ಯಕ್ಕಾಗಿ ನೀವು ಕೆಲ ಕಟ್ಟುನಿಟ್ಟಿನ ಕ್ರಮಗಳನ್ನು ಅನುಸರಿಸಬೇಕು. ಸ್ಥೂಲಕಾಯಕ್ಕೂ ಹೃದಯದ ಒತ್ತಡಕ್ಕೂ ನೇರ ಸಂಬಂಧವಿದೆ. ಹೀಗಾಗಿ ಮೊದಲು ತೂಕವನ್ನು ನಿಯಂತ್ರಿಸಿ. ಜಂಕ್ ಫುಡ್‌ನಿಂದ ದೂರವಿರಿ. ಅಧಿಕ ರಕ್ತದೊತ್ತಡ ಮತ್ತು ಮಧುಮೇಹವನ್ನು ನಿಯಂತ್ರಿಸಿ, ಧೂಮಪಾನ, ಮದ್ಯಪಾನ ಚಟವಿದ್ದರೆ ಕೂಡಲೇ ತ್ಯಜಿಸಿ, ಲಘು ವ್ಯಾಯಾಮ, ನಿಧಾನ ನಡಿಗೆಯಂತಹ ಚಟುವಟಿಕೆಗಳನ್ನು ಅನುಸರಿಸಿ’ ಎಂದು ಅವರು ಸಲಹೆ ನೀಡಿದ್ದಾರೆ.
 
ಹೆಸರು ನೋಂದಾಯಿಸಿಕೊಳ್ಳಲು ಕರೆ ಮಾಡಬೇಕಾದ ದೂರವಾಣಿ ಸಂಖ್ಯೆ-08049294929, 9900061061, 9164433888.
 
ದಿನಾಂಕ: ಸೆ. 29, ಶನಿವಾರ
ಸಮಯ: ಬೆಳಿಗ್ಗೆ 9ರಿಂದ ಮಧ್ಯಾಹ್ನ 3
ಸ್ಥಳ : ಪುಣ್ಯಾ ಆಸ್ಪತ್ರೆ , 80  ಅಡಿ ರಸ್ತೆ, ಕೆ.ಹೆಚ್.ಬಿ ಕಾಲೋನಿ, ಬಸವೇಶ್ವರನಗರ ಬೆಂಗಳೂರು.
ಮಾಧ್ಯಮ ಸಂಪರ್ಕ :ದೀಪಕ್ 8660605954

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ