ಮೈಮೇಲೆ ಚಾಕುವಿನಿಂದ ಚುಚ್ಚಿದ ರೀತಿ ಕಾಣುತ್ತಿರುವ ಹಾಸುಗಳ ಮೂಕ ರೋದನೆ ,ಜಾನುವಾರಗಳ ಮೂಕ ರೋದನೆ ಕಂಡು ಮರುಗುತ್ತಿರುವ ರೈತರು ,ಇನ್ನೂ ಜಾನುವಾರುಗಳ ಬಳಿ ಹೋಗಿ ಪರಿಶೀಲನೆ ನಡೆಸುತ್ತಿರುವ ಅಧಿಕಾರಿಗಳು ಈ ದೃಶ್ಯಗಳು ಕಂಡುಬಂದಿದ್ದು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ .ನೋಡ ನೋಡುತಿದ್ದಂತೆ ಹಾಸುಗಳ ಮೈಮೇಲೆ ಗಂಟು ಕಟ್ಟಿಕೊಂಡು ರಕ್ತ ಸುರಿಸುತ್ತಿರುವ ರೀತಿಯಲ್ಲಿ ಕಂಡುಬಂದಿದೆ . ಪಶು ಸಂಗೋಪನಾ ಇಲಾಖೆ ವೈದ್ಯರ ಬಳಿ ತೋರಿಸಿ ಚಿಕಿತ್ಸೆ ಕೊಡಿಸಿದ್ರು ವಾಸಿಯಾಗದಂತಹ ಮಾರಕ ರೋಗ ಜಿಲ್ಲೆಯಲ್ಲಿ ಕಂಡುಬಂದಿದೆ. ಕ್ಯಾಪ್ರಿಪಾಕ್ಸ್ ಎಂಬ ವೈರಾಣು ಹರಡಿರುವ ಖಾಯಿಲೆ ಎಂದು ಪತ್ತೆಯಾಗಿದೆ ,ಜಿಲ್ಲೆಯಲ್ಲಿ 42 ಗ್ರಾಮಗಳಲ್ಲಿ 184 ಜಾನುವಾರುಗಳಿಗೆ ಈ ರಿತಿಯ ರೋಗ ಹರಡಿದ್ದು ,ಸಾವಿರಾರು ರೂಪಾಯಿ ಖರ್ಚು ಮಾಡಿದ್ರು ಖಾಯಿಲೆ ವಾಸಿಯಾಗಿಲ್ಲ.ಇದ್ರಿಂದ ಅನ್ನದಾತ ಕಂಗಾಲಾಗಿದ್ದು ಜಿಲ್ಲೆಯಾದ್ಯಂತ ರೋಗ ಹರಡುವ ಆತಂಕ ಎದುರಾಗಿದೆ .
ಇನ್ನೂ ರೋಗದ ಭೀಕರತೆ ಅರಿತ ಚಿಕ್ಕಬಳ್ಳಾಪುರ ಜಿಲ್ಲಾಢಳಿತ ಜಿಲ್ಲೆಯಲ್ಲಿ ಎಲ್ಲಿಯೂ ಜಾನುವಾರುಗಳ ಸಂತೆ ನಡೆಯದಂತೆ ಆದೇಶ ಹೊರಡಿಸಿದ್ದಾರೆ , ಅಕ್ಟೋಬರ್ ಒಂದರಿಂದ 30 ರ ವರೆಗೆ ಅದೇಶ ಅನ್ವಯವಾಗಲಿದೆ, ರೋಗದಿಂದ ರಾಸುಗಳು ಸಾವನ್ನಪ್ಪಿದರೆ ಕರುಗಳಿಗೆ 5000 , ಹಸುಗಳಿಗೆ 20,000 ಎತ್ತುಗಳಾದ್ರೆ 30,000 ಪರಿಹಾರ ಕೊಡ್ತಾವ್ರೆ , ಇನ್ನೂ ರೋಗಬಾದೆಯಿಂದ ನರಳುತ್ತಿರುವ ಜಾನುವಾರುಗಳಿರುವ ಗ್ರಾಮದಿಂದ ಐದು ಕಿ ಮೀ ವ್ಯಾಪ್ತಿಯ ಗ್ರಾಮಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ವ್ಯಾಕ್ಸಿನ್ ನೀಡುತಿದ್ದಾರೆ , ರೋಗಬಾದೆಯಿಂದ ಬಳಲುತ್ತಿರುವ ರಾಸುಗಳಿಂದ ಬರುವ ಹಾಲು ಮನಷ್ಯ ಕುಡಿದರೆ ಯಾವುದೆ ಅಡ್ಡಪರಿಣಾಮ ಬೀರುವುದಿಲ್ಲ ಎಂದು ಅಧಿಕಾರಿಗಳು ಹೇಳ್ತಾರೆ .
ಚಿಕ್ಕಬಳ್ಳಾಪುರ ರೈತನಿಗೆ ಒಂದಲ್ಲಾ ಒಂದು ಸಂಕಷ್ಟ ಎದುರಾಗುತ್ತಿದೆ , ಅತೀವೃಷ್ಟಿ ಅನವೃಷ್ಟಿಯಿಂದ ರೈತ ತತ್ತರಿಸಿ ಹೋಗಿದ್ದ , ಜಾನುವಾರುಗಳಿಗೆ ವಕ್ಕರಿಸಿದ ಚರ್ಮಗಂಟು ರೋಗ ಬಿಡಿಸಲಾಗದ ಕಗ್ಗಂಟಾಗಿರೋದು ನಗ್ನಸತ್ಯ .