ಕರಣ್ ಬರ್ತ್​​ಡೇ ಪಾರ್ಟಿಗೆ ಯಶ್?

ಮಂಗಳವಾರ, 17 ಮೇ 2022 (20:37 IST)
ಬಾಲಿವುಡ್​​ನ ಖ್ಯಾತ ನಿರ್ಮಾಪಕ ಕರಣ್ ಜೋಹರ್ ಪ್ರತೀ ವರ್ಷ ಅದ್ಧೂರಿಯಾಗಿ ತಮ್ಮ ಬರ್ತ್ ಡೇ ಪಾರ್ಟಿ ಆಯೋಜಿಸುತ್ತಾರೆ..ಇದುವರೆಗೆ ಈ ಪಾರ್ಟಿಗೆ ಕೇವಲ ಬಾಲಿವುಡ್ ಕಲಾವಿದರು ಮಾತ್ರ ಬರುತ್ತಿದ್ದರು.ಆದ್ರೀಗ ದಕ್ಷಿಣ ಭಾರತೀಯ ಸಿನಿಮಾಗಳೂ ಬಾಲಿವುಡ್ ಗೆ ಪೈಪೋಟಿ ನೀಡುತ್ತಿವೆ. ಹೀಗಾಗಿ ಬಾಲಿವುಡ್​​ನವ್ರು ಈಗ ದಕ್ಷಿಣ ಭಾರತದ ಸಿನಿಮಾಗಳತ್ತ ಚಿತ್ತಹರಿಸುತ್ತಿದ್ದಾರೆ..ಹೀಗಾಗಿಯೇ ಈ ಬಾರಿ ಕರಣ್ ಬರ್ತ್ ಡೇ ಪಾರ್ಟಿಗೆ ರಾಕಿಂಗ್ ಸ್ಟಾರ್ ಯಶ್ ಗೂ ಆಹ್ವಾನವಿರಲಿದೆ ಎನ್ನಲಾಗಿದೆ. ಕೆಜಿಎಫ್-2 ಟ್ರೈಲರ್ ರಿಲೀಸ್ ಈವೆಂಟ್​ಗೆ ಕರಣ್ ಜೋಹರ್ ನಿರೂಪಕರಾಗಿ ಬಂದಿದ್ದಾಗ ನಟ ಯಶ್​​ರನ್ನು ಹಾಡಿ ಹೊಗಳಿದ್ರು..ಅಲ್ಲದೇ, ಕೆಜಿಎಫ್ ಸಿನಿಮಾ ಬಗ್ಗೆಯೂ ಕರಣ್ ಭಾರೀ ಪ್ರಶಂಸೆ ವ್ಯಕ್ತಪಡಿಸಿದ್ರು.. ಹೀಗಾಗಿ ತಮ್ಮ ಬರ್ತ್ ಡೇ ಪಾರ್ಟಿಗೆ ಯಶ್​ಗೆ ಆಹ್ವಾನ ನೀಡಲಾಗುತ್ತೆ ಎಂಬ ಮಾತು ಕೇಳಿ ಬರುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ