ಯದುವೀರ್ ಒಡೆಯರ್ ವಿರುದ್ದ ಸಿದ್ದರಾಮಯ್ಯ ಪುತ್ರ ಯತೀಂದ್ರ ಕಣಕ್ಕೆ

Krishnaveni K

ಶನಿವಾರ, 16 ಮಾರ್ಚ್ 2024 (10:33 IST)
Photo Courtesy: Twitter
ಮೈಸೂರು: ಮೈಸೂರಿನಲ್ಲಿ ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್ ವಿರುದ್ಧ ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ ಕಣಕ್ಕಿಳಿಯುವ ಸಾಧ‍್ಯತೆಯಿದೆ.

ಇತ್ತ ಬಿಜೆಪಿ ರಾಜವಂಶಸ್ಥ ಯದುವೀರ್ ಒಡೆಯರ್ ಅವರನ್ನು ಕಣಕ್ಕಿಳಿಸಿದ ಬೆನ್ನಲ್ಲೇ ಅತ್ತ ಕಾಂಗ್ರೆಸ್ ಯತೀಂದ್ರರನ್ನು ಕಣಕ್ಕಿಳಿಸಲು ತಯಾರಿ ನಡೆಸಿದೆ. ಸದ್ಯಕ್ಕೆ ಯತೀಂದ್ರ ಶಾಸಕರಾಗಿದ್ದಾರೆ. ಆದರೆ ಸಿದ್ದರಾಮಯ್ಯಗೆ ತಮ್ಮ ತವರು ಜಿಲ್ಲೆಯಲ್ಲಿ ಪಕ್ಷವನ್ನು ಗೆಲ್ಲಿಸಿಕೊಡುವ ಹಠವಿದೆ. ಇದಕ್ಕಾಗಿ ಪುತ್ರನನ್ನೇ ಕಣಕ್ಕಿಳಿಸಲು ತಯಾರಿ ನಡೆಸಿದ್ದಾರೆ.

ಇನ್ನು, ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆಯಾದ ಬೆನ್ನಲ್ಲೇ ಯದುವೀರ್ ಚುನಾವಣಾ ಕೆಲಸ ಶುರು ಮಾಡಿದ್ದಾರೆ. ಜನರೊಂದಿಗೆ ಸಾಮಾನ್ಯನಂತೇ ಬೆರೆತು ಸ್ಥಳೀಯ ನಾಯಕರನ್ನೂ ಭೇಟಿಯಾಗಿ ವಿಶ್ವಾಸ ಗಿಟ್ಟಿಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಆ ಮೂಲಕ ಜನರ ವಿಶ್ವಾಸ ಗಿಟ್ಟಿಸುವ ಪ್ರಯತ್ನ ಮಾಡುತ್ತಿದ್ದಾರೆ.

ಒಂದಡೆ ಯದುವೀರ್ ಚುನಾವಣಾ ಪ್ರಚಾರ ಕೆಲಸ ಶುರು ಮಾಡಿದ್ದರೆ ಇತ್ತ ಕಾಂಗ್ರೆಸ್ ನಲ್ಲಿ ಶೀಘ್ರವೇ ಮೈಸೂರು ಅಭ್ಯರ್ಥಿ ಘೋಷಣೆಗೆ ಒತ್ತಡ ಕೇಳಿಬಂದಿದೆ. ಅದರಲ್ಲೂ ಯದುವೀರ್ ಸೆಡ್ಡು ಹೊಡೆಯಲು ಯತೀಂದ್ರರೇ ತಕ್ಕ ಅಭ್ಯರ್ಥಿ ಎಂದು ಕಾಂಗ್ರೆಸ್ ನಾಯಕರ ಅಭಿಪ್ರಾಯ. ಅದಕ್ಕಾಗಿ ಅವರನ್ನೇ ಕಣಕ್ಕಿಳಿಸಲು ಒತ್ತಾಯ ಹೆಚ್ಚಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ