ಬಿಜೆಪಿ ಶಾಸಕರಿಗೆ ಸೈಲೆಂಟಾಗಿ ಬಿಗ್ ಶಾಕ್ ನೀಡುತ್ತಿರೋ ಯಡಿಯೂರಪ್ಪ?
ಶನಿವಾರ, 11 ಜನವರಿ 2020 (18:08 IST)
ಸಿಎಂ ಬಿ.ಎಸ್.ಯಡಿಯೂರಪ್ಪನವರು ಬಿಜೆಪಿ ನೂತನ ಶಾಸಕರಿಗೆ ಮೌನವಾಗಿಯೇ ಶಾಕ್ ನೀಡ್ತಿದ್ದಾರಾ? ಇಂಥದ್ದೊಂದು ಚರ್ಚೆ ಶುರುವಾಗಿದೆ.
ಈ ಚರ್ಚೆಗೆ ಅಸಲಿ ಕಾರಣವೂ ಇದೆ ಎನ್ನಲಾಗಿದೆ. ವಿಜಯ ನಗರ ಜಿಲ್ಲೆ ರಚನೆ ಕುರಿತು ಎದ್ದಿದ್ದ ಧ್ವನಿ ಇದೀಗ ಕ್ಷೀಣಿಸತೊಡಗಿದೆ.
ಹೀಗಾಗಿ ಆ ಭಾಗದ ಜನರು ಇನ್ನೇನು ತಮ್ಮ ವಿಜಯ ನಗರ ಜಿಲ್ಲೆ ರಚನೆ ಆಗೇ ಬಿಟ್ಟಿತು ಅಂತ ಖುಷಿ ಪಡುವಷ್ಟರಲ್ಲಿ ಸಿಎಂ ಮೌನಕ್ಕೆ ಜಾರಿರೋದು ಹಲವು ಅನುಮಾನಗಳಿಗೆ ಕಾರಣವಾಗುತ್ತಿದೆ.
ಸಚಿವ ಸ್ಥಾನಕ್ಕಿಂತ ನನಗೆ ವಿಜಯ ನಗರ ಜಿಲ್ಲೆ ರಚನೆ ಆಗೋದು ಮುಖ್ಯ ಅಂತ ಶಾಸಕ ಆನಂದ್ ಸಿಂಗ ಹೇಳುತ್ತಲೇ ಬರುತ್ತಿದ್ದಾರೆ. ಆದರೂ ಸಚಿವ ಸಂಪುಟ ವಿಸ್ತರಣೆ ಬಳಿಕ ಮತ್ತೆ ಧ್ವನಿ ಎತ್ತೋದಾಗಿ ಆನಂದ್ ಸಿಂಗ್ ಹೇಳಿರೋದು ಹೊಸ ಕುತೂಹಲಕ್ಕೆ ಕಾರಣವಾಗುತ್ತಿದೆ.