ಬೆದರಿಕೆ, ಹಗುರ ಮಾತಿಗೆ ಜನ ಉತ್ತರ ಕೊಡ್ತಾರೆ ಎಂದ ಯಡಿಯೂರಪ್ಪ

ಶನಿವಾರ, 9 ಮಾರ್ಚ್ 2019 (16:20 IST)
ರಾಜ್ಯದಲ್ಲಿ ಲೋಕಸಭಾ ಟಿಕೆಟ್ ಹಂಚಿಕೆ ವಿಚಾರ ಕುರಿತು ನಾನು ಅಮಿತ್ ಶಾ ಭೇಟಿಯಾಗಿ ಚರ್ಚೆ ಮಾಡಿದ್ದೇನೆ. ಮತ್ತೆ ನಮ್ಮ ರಾಜ್ಯದ ಮುಖಂಡರ ಜೊತೆ ಚರ್ಚಿಸಿ ದೆಹಲಿಗೆ ಹೋಗಿ ಫೈನಲ್ ಮಾಡ್ತೇವೆ ಅಂತ ಮಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ.

ಸುಮಲತಾಗೆ ಸೀಟ್ ಸಿಗೋದು ಬಿಡೋದು ಜೆಡಿಎಸ್-ಕಾಂಗ್ರೆಸ್ ಗೆ ಬಿಟ್ಟದ್ದು. ಆದ್ರೆ ಸುಮಲಾತ ಬಗ್ಗೆ ಹಗುರವಾದ ಮಾತು ಮೆಚ್ಚುವಂಥ ಮಾತಲ್ಲ. ಬೆದರಿಕೆ ಹಾಕೋದು ಮತ್ತು ಹಗುರವಾಗಿ ಮಾತನಾಡೋದಕ್ಕೆ ಮಂಡ್ಯದ ‌ಜನ ಉತ್ತರ ಕೊಡ್ತಾರೆ ಎಂದ್ರು. ಸುಮಲತಾ ಅವರನ್ನು ಬಿಜೆಪಿಗೆ ಸೆಳೆಯುವ ಯಾವುದೇ ಪ್ರಯತ್ನ ಮಾಡಿಲ್ಲಾ. ಅವರು ಪಕ್ಷೇತರರಾಗಿ ನಿಂತ್ರೆ ಬೆಂಬಲಿಸುವ ಬಗ್ಗೆಯೂ ನಿರ್ಧಾರವಾಗಿಲ್ಲ. ಮೋದಿ ಅವರ ಬಗ್ಗೆ ಮಾತನಾಡೋ ನೈತಿಕತೆ ಅಪ್ಪ ಮಕ್ಕಳಿಗೆ ಇಲ್ಲ ಎಂದರು.

ಇದರಿಂದ ಅವರು ಜನರ ಮುಂದೆ ನಗೆಪಾಟಲಿಗೆ ಈಡಾಗ್ತಾರೆ. ನಾಳೆ ನಾಡಿದ್ದು ಲೋಕಸಬಾ ಚುನಾವಣೆ ಘೋಷಣೆಯಾಗುತ್ತೆ. 22 ಲೋಕಸಭಾ ಕ್ಷೇತ್ರ ಗೆಲ್ಲುವ ಉದ್ದೇಶದಿಂದ ಎಲ್ಲಾ ಕಡೆ ಪ್ರವಾಸದಲ್ಲಿದ್ದೇನೆ. ಮೋದಿ ಪರ ನಿರೀಕ್ಷೆ ಮೀರಿ ಅಲೆ ಬೀಸುತ್ತಿದೆ. ಕರ್ನಾಟಕ ಸರ್ಕಾರ ಜನರ ಪಾಲಿಗೆ ಬದುಕಿದ್ದೂ ಸತ್ತಂತೆ ಇದೆ. ಅಭಿವೃದ್ಧಿ ಸ್ಥಗಿತವಾಗಿ ವರ್ಗಾವಣೆ ದಂಧೆ ಮತ್ತು ಭ್ರಷ್ಟಾಚಾರದಲ್ಲಿ ನಿರತವಾಗಿದೆ ಸರಕಾರ ಎಂದು ದೂರಿದರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ