ಯಶ್, ದರ್ಶನ್ ರನ್ನು ಭೇಟಿ ಮಾಡುವೆ ಎಂದು ಯಡಿಯೂರಪ್ಪ

ಗುರುವಾರ, 23 ಮೇ 2019 (15:52 IST)
ಹೈವೋಲ್ಟೇಜ್ ಕದನ ಮಂಡ್ಯದಲ್ಲಿ ಜೋಡೆತ್ತುಗಳಾಗಿ ಭರ್ಜರಿ ಪ್ರಚಾರ ನಡೆಸಿದ ನಟ ಯಶ್ ಮತ್ತು ದರ್ಶನ್ ರನ್ನು ಭೇಟಿ ಮಾಡೋದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.


ಮಂಡ್ಯದಲ್ಲಿ ಸುಮಲತಾ ಗೆಲುವು ಸಾಧಿಸಿರುವ ಬೆನ್ನಲ್ಲೇ ಮಾಧ್ಯಮದವರೊಂದಿಗೆ ಮಾತನಾಡಿದ ಬಿ.ಎಸ್.ಯಡಿಯೂರಪ್ಪನವರು ಸುಮಲತಾ ಅಂಬರೀಶ್ ಗೆಲುವಿಗೆ ಕಾರಣವಾಗಿರುವ ನಟರನ್ನು ಭೇಟಿ ಮಾಡುವುದಾಗಿ ತಿಳಿಸಿದ್ರು.

ರಾಜ್ಯದಲ್ಲಿ ಬಿಜೆಪಿ 22 ಸ್ಥಾನಗಳನ್ನು ಗಳಿಸುತ್ತದೆ ಎಂದು ನಾನು ಅಂದಾಗ ಯಾರೂ ನಂಬಲಿಲ್ಲ. ಮಾಧ್ಯಮದವರು, ಜೆಡಿಎಸ್ ಹಾಗೂ ಕಾಂಗ್ರೆಸ್ ನವರೂ ನಂಬಲಿಲ್ಲ. ಆದರೆ ನಾವು ನುಡಿದಂತೆ ಗುರಿ ಸಾಧಿಸಿದ್ದೇವೆ ಎಂದು ಯಡಿಯೂರಪ್ಪ ಹೇಳಿದ್ರು.
ಇನ್ನು ರಾಜ್ಯದ ಒಟ್ಟು 28 ರಲ್ಲಿ 24 ಕ್ಷೇತ್ರಗಳಲ್ಲಿ ಬಿಜೆಪಿ ಪ್ರಾಬಲ್ಯ ಮೆರೆಯುತ್ತಿದೆ. ಎರಡು ಸ್ಥಾನ ಕಾಂಗ್ರೆಸ್ ಹಾಗೂ ಹಾಸನದಲ್ಲಿ ಜೆಡಿಎಸ್ ಮತ್ತು ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ 98 ಸಾವಿರ ಮತಗಳ ಅಂತರದಿಂದ ಗೆದ್ದು ಬೀಗಿದ್ದಾರೆ.

ಕಲಬುರಗಿ ಮಲ್ಲಿಕಾರ್ಜುನ ಖರ್ಗೆ ಸೋಲು
ಬೆಳಗಾವಿ ಸುರೇಶ್ ಅಂಗಡಿ ಗೆಲುವು
ಚಿಕ್ಕೋಡಿ ಪ್ರಕಾಶ ಹುಕ್ಕೇರಿ ಸೋಲು
ಮಂಡ್ಯದಲ್ಲಿ ಸುಮಲತಾಗೆ 50 ಸಾವಿರ ಮತಗಳಿಂದ ಮುನ್ನಡೆ
ಹಾವೇರಿ ಶಿವಕುಮಾರ ಉದಾಸಿ ಗೆಲುವು
ದಾವಣಗೆರೆ ಜಿ.ಎಂ.ಸಿದ್ದೇಶ್ವರ 85 ಸಾವಿರ ಮತಗಳಿಂದ ಮುನ್ನಡೆ
ಚಿಕ್ಕಬಳ್ಳಾಪುರ ವೀರಪ್ಪ ಮೋಯಿಲಿ ಸೋಲು
ರಾಯಚೂರು ಬಿಜೆಪಿಯ ರಾಜಾ ಅಮರೇಶ್ ನಾಯಕ್ ಗೆಲುವು
ಕೊಪ್ಪಳ ಬಿಜೆಪಿಯ ಸಂಗಣ್ಣ ಕರಡಿ 38 ಸಾವಿರ ಮತಗಳಿಂದ ಗೆಲುವು
ಹಾವೇರಿ ಶಿವಕುಮಾರ ಉದಾಸಿ ಗೆಲುವು
ಉಡುಪಿ – ಚಿಕ್ಕಮಗಳೂರು ಶೋಭಾ ಕರಂದ್ಲಾಜೆ ಗೆಲುವು
ದಕ್ಷಿಣ ಕನ್ನಡ ನಳೀನ್ ಕುಮಾರ್ ಕಟೀಲ್ 2 ಲಕ್ಷ 70 ಸಾವಿರ ಮತ ಅಂತರದಿಂದ ಗೆಲುವು
ಕೋಲಾರ ಕೆ.ಎಚ್.ಮುನಿಯಪ್ಪ ಸೋಲು
ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಗೆಲುವು
ಶಿವಮೊಗ್ಗ ಬಿ.ವೈ.ರಾಘವೇಂದ್ರ ಗೆಲುವು
ಬಳ್ಳಾರಿ ದೇವೇಂದ್ರಪ್ಪ ಗೆಲುವು
ಬೆಂಗಳೂರು ಉತ್ತರ ಸದಾನಂದಗೌಡ ಗೆಲುವು  
ತುಮಕೂರು ಹೆಚ್.ಡಿ.ದೇವೇಗೌಡ ಸೋಲು
ಬೆಂಗಳೂರು ಸೆಂಟ್ರಲ್ ರಿಜ್ವಾನ್ ಅರ್ಷದ್ ಸೋಲು
ಉತ್ತರ ಕನ್ನಡ ಅನಂತಕುಮಾರ ಹೆಗಡೆ 4 ಲಕ್ಷ ಮತ ಅಂತರದಿಂದ ಗೆಲುವು
ಬೆಂಗಳೂರು ಗ್ರಾಮಾಂತರ ಡಿ.ಕೆ.ಸುರೇಶ ಗೆಲುವು
ಕೋಲಾರ ಮುನಿಸ್ವಾಮಿ ಗೆಲುವು
ದಕ್ಷಿಣ ಕನ್ನಡ ನಳೀನ್ ಕುಮಾರ ಕಟೀಲ್ ಗೆಲುವು
ಬಾಗಲಕೋಟೆ ಪಿ.ಸಿ.ಗದ್ದಿಗೌಡ ಮುನ್ನಡೆ
ವಿಜಯಪುರ ರಮೇಶ ಜಿಗಜಿಣಗಿ ಗೆಲುವು
ಕಲಬುರಗಿ ಉಮೇಶ ಜಾಧವ ಗೆಲುವು
ಬೀದರ್ ಭಗವಂತ ಖೂಬಾ ಗೆಲುವು
ಧಾರವಾಡ ಪ್ರಲ್ಹಾದ ಜೋಶಿ ಗೆಲುವು
ಚಿತ್ರದುರ್ಗ ಎ.ನಾರಾಯಣಸ್ವಾಮಿ ಗೆಲುವು
ಬೆಂಗಳೂರು ದಕ್ಷಿಣ ತೇಜಸ್ವಿ ಸೂರ್ಯ ಗೆಲುವು
ಮೈಸೂರು ಪ್ರತಾಪ ಸಿಂಹ ಗೆಲುವು
ಚಿಕ್ಕಬಳ್ಳಾಪುರ ಬಿ.ಎನ್.ಬಚ್ಚೇಗೌಡ ಗೆಲುವು
ಕೋಲಾರ ಕೆ.ಹೆಚ್.ಮುನಿಯಪ್ಪ ಸೋಲು

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ