ಬಸ್ ಪ್ರಯಾಣದ ವೇಳೆ ಕೆಲವರು ಮೊಬೈಲ್ಗಳಲ್ಲಿ ಹಾಡು, ಪದ್ಯ, ವಾರ್ತೆ, ಸಿನಿಮಾ ಇತ್ಯಾದಿ ಹಾಕಿ ಸಹ ಪ್ರಯಾಣಿಕರಿಗೆ ತೊಂದರೆ ಉಂಟು ಮಾಡುತ್ತಿರುವ ಬಗ್ಗೆ ಕೋರ್ಟ್ ಮೊರೆ ಹೋಗಲಾಗಿತ್ತು. ಇದನ್ನು ಗಮನಿಸಿದ ಕೆಎಸ್ಆರ್ಟಿಸಿ ನಿಗಮದ ಎಂ.ಡಿ. ಶಿವಯೋಗಿ ಕಳಸದ ಅವರು, ಇನ್ನು ಮುಂದೆ ಬಸ್ಗಳಲ್ಲಿ ಮೊಬೈಲ್ ಸದ್ದು ಮಾಡುವ ಪ್ರಯಾಣಿಕರಿಗೆ ಸದ್ದು ಮಾಡದಂತೆ ಬಸ್ ನಿರ್ವಾಹಕ ಮನವಿ ಮಾಡಬೇಕು. ಅದನ್ನೂ ಲೆಕ್ಕಿಸದೇ ಇದ್ದಾಗ ಅಂತಹ ಪ್ರಯಾಣಿಕರನ್ನು ಪ್ರಯಾಣದ ಮಧ್ಯದಲ್ಲಿಯೇ ಬಸ್ಸಿನಿಂದ ಇಳಿಸಬೇಕು. ಇದಕ್ಕೂ ವಿರೋಧ ವ್ಯಕ್ತಪಡಿಸಿದರೆ ಸ್ಥಳೀಯ ಪೊಲೀಸ್ ಠಾಣೆಗೆ ಪ್ರಯಾಣಿಕ ಅಂತಹವರ ವಿರುದ್ಧ ದೂರು ನೀಡಬಹುದು ಎಂದು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.