ಹುಡುಗಿಯರ ಮೇಲೆ ನಿಂಬೆಹಣ್ಣು, ಸೌತೆಕಾಯಿ ಎಸೆದು ಚುಡಾಯಿಸುತ್ತಿದ್ದ ಯುವಕರಿಗೆ ತಕ್ಕ ಶಾಸ್ತಿ ಮಾಡಿದ ಯುವತಿ

ಶನಿವಾರ, 24 ನವೆಂಬರ್ 2018 (07:28 IST)
ಹುಬ್ಬಳ್ಳಿ : ಯುವತಿಯೊಬ್ಬಳು ರಸ್ತೆಯಲ್ಲಿ ಹೋಗುತ್ತಿದ್ದ ಯುವತಿಯರಿಗೆ ಚುಡಾಯಿಸುತಿದ್ದ ಹುಡುಗನೊಬ್ಬನಿಗೆ ಥಳಿಸಿದ ಘಟನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.


ಹುಬ್ಬಳ್ಳಿಯ ಹಳೇ ಬಸ್ ನಿಲ್ದಾಣದ ಮುಂಭಾಗದಲ್ಲಿ ಫುಟ್​ಪಾತ್ ಮೇಲೆ ಹೋಗುತ್ತಿದ್ದ ಯುವತಿಯರಿಗೆ ಖಾನಾವಳಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕರು ನಿಂಬೆಹಣ್ಣು, ಸೌತೆಕಾಯಿ ಎಸೆದು ಚುಡಾಯಿಸುತ್ತಿದ್ದರಂತೆ.


ಇದನ್ನು ಕಂಡು ರೊಚ್ಚಿಗೆದ್ದ ವಿವಿಧ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಂಡಿರುವ ಸ್ವಾತಿ ಕದಂ ಎಂಬುವರು ಆ ಯುವಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಆಗ ಆತ ದಬ್ಬಾಳಿಕೆ ಮಾಡಿದ್ದರಿಂದ  ರೊಚ್ಚಿಗೆದ್ದ ಸ್ವಾತಿ ಆತನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾಳೆ. ಈ ದೃಶ್ಯವನ್ನು ಅಲ್ಲಿದ್ದವರು ತಮ್ಮ ಮೊಬೈಲ್​ ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಇದೀಗ ವೈರಲ್ ಆಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ