ಸಂಸದ ಪ್ರಹ್ಲಾದ್ ಜೋಶಿ ವಿರುದ್ಧ ಫೇಸ್ ಬುಕ್ ವಾರ್ ನಡೆಸಿದ ಮಾಜಿ ಶಾಸಕರ ಪುತ್ರಿ
ಗುರುವಾರ, 22 ನವೆಂಬರ್ 2018 (14:31 IST)
ಹುಬ್ಬಳ್ಳಿ : ಬಿಜೆಪಿ ಸಂಸದ ಪ್ರಹ್ಲಾದ್ ಜೋಶಿ ವಿರುದ್ಧ ಕುಂದಗೋಳ ಮಾಜಿ ಶಾಸಕ ಎಸ್.ಐ.ಚಿಕ್ಕನಗೌಡರ ಪುತ್ರಿ ನಂದಾ ಫೇಸ್ ಬುಕ್ ನಲ್ಲಿ ಆಕ್ರೊಶ ವ್ಯಕ್ತಪಡಿಸಿದ್ದಾರೆ.
ಫೇಸ್ ಬುಕ್ ನಲ್ಲಿ ಜೋಶಿ ವಿರುದ್ಧ ಕುಂದಗೋಳ ಮಾಜಿ ಶಾಸಕ ಎಸ್.ಐ.ಚಿಕ್ಕನಗೌಡರ ಪುತ್ರಿ ನಂದಾ ಸಂಸದ ಹಠಾವೋ ಬಿಜೆಪಿ ಬಚಾವೋ ಎಂಬ ಆಂದೋಲನ ಶುರು ಮಾಡಿದ್ದಾರೆ. ನಮ್ಮ ತಂದೆ ಸೋಲಿಗೆ ಕಾರಣರಾದ ಮಹೇಶ್ ಗೌಡ ಜೊತೆಗೆ ನೀವು ಹೊಂದಾಣಿಕೆ ಮಾಡಿದ್ದೀರಿ ಎಂದು ನಂದಾ ಚಿಕ್ಕನಗೌಡ್ರ ಆರೋಪಿಸಿದ್ದಾರೆ.
ಕಳೆದ ವಿಧಾನಸಭೆ ಚುನಾವಣೆ ವೇಳೆ ಬಿಜೆಪಿ ಜಿಲ್ಲಾ ಕಾರ್ಯಕಾರಣಿ ಸದಸ್ಯರಾಗಿದ್ದ ಶಿವನಗೌಡರು ಕಾಂಗ್ರೆಸ್ ಅಭ್ಯರ್ಥಿ ಶಿವಳ್ಳಿ ಪರ ಕೆಲಸ ಮಾಡಿದ್ದರು. ಇದು ನಮ್ಮ ತಂದೆ ಸೋಲಿಗೆ ಕಾರಣವಾಗಿದೆ ಎಂದು ನಂದಾ ಗಂಭೀರವಾಗಿ ಆರೋಪಿಸಿದ್ದಾರೆ.
ನಮ್ಮ ತಂದೆ ಸೋಲಿಗೆ ಕಾರಣದವರಿಗೆ ಬಿಜೆಪಿ ಮಣೆ ಹಾಕುತ್ತಿದೆ. ನಮ್ಮ ತಂದೆ ಸೋಲಿಗೆ ಕಾರಣವಾದವರಿಗೆ ತಕ್ಕ ಬುದ್ಧಿ ಕಲಿಸುತ್ತೇವೆ. ಪ್ರೂಫ್ ಸಮೇತ ಶಿವನಗೌಡ ವಿರುದ್ಧ ಕ್ರಮ ಕೈಗೊಳ್ಳಲು ಹೇಳಿದರೂ ನೀವು ಕ್ರಮ ತೆಗದುಕೊಂಡಿಲ್ಲ ಎಂದು ನಂದಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.