ಕಬ್ಬನ್​ ಪಾರ್ಕ್​ನಲ್ಲಿ ಯುವಕರು-ಯುವತಿಯರು ಇನ್ಮುಂದೆ ಮಿತಿ ಮೀರಿ ನಡೆಯುವಂತಿಲ್ಲ!

ಭಾನುವಾರ, 9 ಏಪ್ರಿಲ್ 2023 (13:33 IST)
ಯುವಕರು-ಯುವತಿಯರು ಇನ್ಮುಂದೆ ಮಿತಿ ಮೀರಿ ನಡೆದುಕೊಳ್ಳದಂತೆ ತೋಟಗಾರಿಕಾ ಇಲಾಖೆ ಮಹತ್ತರ ಹೆಜ್ಜೆ ಇಟ್ಟಿದೆ.ಲವ್ವಿ ಡವ್ನಿಗೆ ಬ್ರೇಕ್ ಹಾಕಲಾಗಿದೆ .ಸಿಲಿಕಾನ್ ಸಿಟಿ ಶಕ್ತಿಕೇಂದ್ರ ವಿಧಾನಸೌಧ  ಬಳಿಕ ಹಸಿರು ಕಳಶದಂತೆ ಕಬ್ಬನ್ ಪಾರ್ಕ್ ಇದೆ.ವಾಯು ವಿಹಾರಿಗಳ ಪಾಲಿಗೆ ಸ್ವರ್ಗ ಎನ್ನಬಹುದು. ಇತ್ತೀಚಿನ ದಿನಗಳಲ್ಲಿ ಕಬ್ಬನ್ ಪಾರ್ಕ್​ನಲ್ಲಿ​ ಅಸಭ್ಯ ವರ್ತನೆ ಆರೋಪ ಹೆಚ್ಚಾಗಿದೆ.
 
ಪ್ರೇಮಿಗಳಿಗೂ ಇದು ವಿಹಾರ ತಾಣ.ಇತ್ತೀಚಿಗೆ ಇಲ್ಲಿ ಸಭ್ಯತೆ ಮೀರಿದ ವರ್ತನೆಗಳು ಮುಜುಗರ ತರಿಸುತ್ತಿದೆ.ಮರಗಿಡಗಳ ಸಂಧಿಯಲ್ಲಿ ಕುಳಿತು ಕೊಳ್ಳುವುದು,ವೃದ್ಧರು, ಮಹಿಳೆಯರು ಓಡಾಡಲು ಆಗದಂತೆ ಮುಜುಗರ ಉಂಟುಮಾಡಿದೆ. ಜೊತೆಗೆ ಕಬ್ಬನ್ ಪಾರ್ಕ್​ನಲ್ಲಿ ಕಸ ಬಿಸಾಕುವುದು,ಸೌಂಧರ್ಯಕ್ಕೆ ಧಕ್ಕೆ ತರುವ ಅನೇಕ ಕೆಲಸಗಳು ನಡೆಯುತ್ತಿವೆ. ಇನ್ಮುಂದೆ ಕಬ್ಬನ್ ಪಾರ್ಕ್​ನಲ್ಲಿ ಲವರ್ಸ್ ಒಟ್ಟಿಗೆ ಕೂತು ಬೇಕಾಬಿಟ್ಟಿಯಾಗಿ ಹುಚ್ಚುಕುದುರೆ ಹಾಗೆ ಆಡುವಂತಿಲ್ಲ.ಇದಕ್ಕಾಗಿ ಭದ್ರತಾ ಸಿಬ್ಬಂದಿ ನಿಯೋಜಿಸಿದ್ದು, ಮೈಕ್ ಮೂಲಕ ಕೂಗಿ ಎಚ್ಚರಿಸುವ ಕೆಲಸ ಮಾಡಲಿದ್ದಾರೆ.ಸೆಕ್ಯುರಿಟಿ ಗಾರ್ಡ್​ ಮೈಕ್ ಮೂಲಕ ಜಾಗೃತಿ ಮೂಡಿಸುವ ಕೆಲಸ ನಡೆದಿದೆ.ಪ್ರೇಮಿಗಳು ಜೊತೆಗೆ ಕೂರುವಂತಿಲ್ಲ ಎನ್ನುವ ನಿಯಮವಲ್ಲ. ಆದರೆ ಬೇರೆ ಜನರಿಗೆ ಮುಜುಗರ ತರುವ ರೀತಿ ನಡೆದುಕೊಳ್ಳಬಾರದು ಅನ್ನೋದಷ್ಟೇ ಈ ಕ್ರಮದ ಉದ್ದೇಶವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ