ಉದ್ಯೋಗಿ ಕೊಡಿಸುವುದಾಗಿ ಹೇಳಿ ಯುವತಿಯ ಅತ್ಯಾಚಾರ

ಶನಿವಾರ, 24 ಫೆಬ್ರವರಿ 2018 (11:24 IST)
ಉದ್ಯೋಗ ಕೊಡಿಸುವ ಆಮಿಷ ನೀಡಿ ಯುವತಿಯನ್ನು ಕರೆಸಿಕೊಂಡ ಕಾಮುಕನೊಬ್ಬ ಅತ್ಯಾಚಾರ ಎಸಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ನೇಪಾಳ ಮೂಲದ 22ವರ್ಷದ ಯುವತಿಯನ್ನು ನೇಪಾಳ ಮೂಲದ ಕಾಮುಕ ಸುರೇಶ ಈಚೆಗೆ ಕರೆಸಿಕೊಂಡು ಅತ್ಯಾಚಾರ ಎಸಗಿದ್ದಾನೆ.

ಖಾಸಗಿ ಹೋಟೆಲ್‌ನಲ್ಲಿ ಕ್ಯಾಶೀಯರ್ ಆಗಿರುವ ಸುರೇಶ ಯುವತಿಯನ್ನು ಹೋಟೆಲ್‌ಗೆ ಕರೆಸಿಕೊಂಡು ಕೆಲಸ ಕೊಡಿಸುವುದಾಗಿ ಪುಸಲಾಯಿಸಿ ಅತ್ಯಾಚಾರ ಎಸಗಿದ್ದಾನೆ. ನಂತರ ಮದುವೆ ಮಾಡಿಕೊಳ್ಳುವುದಾಗಿ ಭರವಸೆ ನೀಡಿ ಪರಾರಿಯಾಗಿದ್ದಾನೆ.
 
ಆರೋಪಿಗೆ ಮದುವೆಯಾಗಿರುವ ವಿಚಾರ ತಿಳಿದ ಯುವತಿ ಬಾಣಸವಾಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ