ನಿಮ್ಮ ಆಸ್ಪತ್ರೆ ಬಿಲ್ ನೀವು ಆಯ್ಕೆ ಮಾಡಿಕೊಳ್ಳೋ ಕೊಠಡಿಯ ಮೇಲೆ ಡಿಪೆಂಡ್ ಆಗಿರುತ್ತೆ
ದಿನೇ-ದಿನೇ ಹೆಚ್ಚಾಗ್ತಿರೋ ಹಣದುಬ್ಬರದಿಂದ ನಿಮ್ ಆರೋಗ್ಯ ವಿಮೆ (Health Insurance) ರಕ್ಷಣೆ ಕೂಡ ಸಾಕಾಗೋದಿಲ್ಲ. ದೊಡ್ಡ ಮೊತ್ತದ ವಿಮಾರಕ್ಷಣೆ ಕೊಂಡ್‌ಕೊಳ್ಳೋದು ಎಲ್ರಿಗೂ ಸಾಧ್ಯ ಆಗೋದಿಲ್ಲ. ಅಂತಹ ಪರಿಸ್ಥಿತಿಲಿ, ಸೂಪರ್ ಟಾಪ್-ಅಪ್ ಪಾಲಿಸಿ ನಿಮ್ಗೆ ಹೆಚ್ಚು ಉಪಯೋಗ ಆಗ್ಬಹುದು. ಅದು ನಿಮ್ಗೆ ಕಡಿಮೆ ಪ್ರೀಮಿಯಮ್‌ನಲ್ಲಿ ಹೆಚ್ಚಿನ ರಕ್ಷಣೆ ಕೊಡತ್ತೆ. ಸೂಪರ್ ಟಾಪ್-ಅಪ್ ಪಾಲಿಸಿಯಲ್ಲಿನ ಮೊದಲೇ ಅಸ್ತಿತ್ವದಲ್ಲಿರೋ ಕಾಯುವಿಕೆ ಅವಧಿಗೂ ಸ್ವಲ್ಪ ವ್ಯತ್ಯಾಸವಿರಬಹುದು. ಮೊದಲೇ ಅಸ್ತಿತ್ವದಲ್ಲರೋ ಕಾಯಿಲೆಗಳಿಗೂ ನಿಮಗೆ ರಕ್ಷಣೆ ಬೇಕಾದರೆ ನೀವು ಅನೇಕ ಅಂಶಗಳನ್ನು ಪರಿಗಣಿಸಬೇಕಾಗುತ್ತೆ. ಸೂಪರ್ ಟಾಪ್ ಅಪ್ ಪಾಲಿಸಿ ತೊಗೊಳ್ಳೋವಾಗ ಕೆಲ ಅಂಶಗಳನ್ನು ನೆನಪಿಟ್ಟುಕೊಳ್ಳಬೇಕಾಗುತ್ತೆ. ನಿಮ್ಮ ಆಸ್ಪತ್ರೆ ಬಿಲ್ ನೀವ್ ಆಯ್ಕೆ ಮಾಡ್ಕಳೋ ಕೊಠಡಿಯ ಮೇಲೆ ಡಿಪೆಂಡ್ ಆಗಿರುತ್ತೆ. ಕೊಠಡಿಯ ಬಾಡಿಗೆ ಹೆಚ್ಚಿದ್ರೆ ನಿಮ್ ಬಿಲ್ ಕೂಡಾ ಹೆಚ್ಚಾಗತ್ತೆ. ಯಾವಾಗ ನೀವೊಂದು ಟಾಪ್-ಅಪ್ ಪ್ಲಾನ್ ಕೊಳ್ಳಬೇಕು ಎನ್ನುವ ನಿಮ್ಮ ಪ್ರಶ್ನೆಗೆ ಈ ವಿಡಿಯೋ ಉತ್ತರ ನೀಡುತ್ತದೆ.