ವಕ್ಫ್ ಆಸ್ತಿ ಯತ್ನಾಳ್ ಅಪ್ಪನ ಆಸ್ತಿನಾ ಬಡವರಿಗೆ ದಾನ ಮಾಡಕ್ಕೆ: ಜಮೀರ್ ಅಹ್ಮದ್

Krishnaveni K

ಮಂಗಳವಾರ, 8 ಅಕ್ಟೋಬರ್ 2024 (16:25 IST)
ಬೆಂಗಳೂರು: ವಕ್ಫ್ ಆಸ್ತಿಯನ್ನು ಬಡವರಿಗೆ ದಾನ ಮಾಡಿ ಎಂದಿದ್ದ ಬಿಜೆಪಿ ಶಾಸಕ ಬಸನಗೌಡ ಯತ್ನಾಳ್ ಗೆ ಸಚಿವ ಜಮೀರ್ ಅಹ್ಮದ್ ತಿರುಗೇಟು ನೀಡಿದ್ದಾರೆ. ಇದೇನು ಅಪ್ಪನ ಆಸ್ತಿನಾ ಎಂದು ಕೇಳಿದ್ದಾರೆ.

ವಕ್ಫ್ ಬೋರ್ಡ್ ತಿದ್ದುಪಡಿ ಬಿಲ್ ಗೆ ಪ್ರತಿಕ್ರಿಯಿಸಿದ್ದ ಬಸನಗೌಡ ಯತ್ನಾಳ್ ವಕ್ಫ್ ಆಸ್ತಿಯನ್ನು ತಾಕತ್ತಿದ್ದರೆ ಬಡವರಿಗೆ ದಾನ ಮಾಡಲಿ. ಇದನ್ನು ಬಡವರ ಉದ್ದಾರಕ್ಕಾಗಿ ಮಾಡಿಕೊಂಡಿದ್ದಲ್ವಾ? ಹಾಗಿದ್ದರೆ ಬಡವರಿಗೆ ಹಂಚಲಿ ಎಂದು ಸವಾಲು ಹಾಕಿದ್ದರು. ಇದಕ್ಕೀಗ ಜಮೀರ್ ಪ್ರತಿಕ್ರಿಯಿಸಿದ್ದಾರೆ.

‘ಮಾಧ್ಯಮಗಳಲ್ಲಿ ಯತ್ನಾಳ್ ಹೇಳುವುದನ್ನು ನೋಡಿದ್ದೇನೆ. ವಕ್ಫ್ ಆಸ್ತಿಯನ್ನು ಬಡವರಿಗೆ ಹಂಚಲಿ ಎಂದಿದ್ದಾರೆ. ವಕ್ಫ್ ಆಸ್ತಿಯನ್ನು ಬಡವರಿಗೆ ಹಂಚಲು ಇದೇನು ನನ್ನ ಅಪ್ಪನ ಆಸ್ತಿನಾ? ಅವರ ಅಪ್ಪನ ಆಸ್ತಿನಾ ಬಡವರಿಗೆ ಹಂಚಲಿ ಎನ್ನುವುದಕ್ಕೆ. ಇದನ್ನು ಸಮಾಜಕ್ಕೆ ಒಳ್ಳೆಯದಾಗಲಿ ಎಂದು ದಾನಿಗಳು ನೀಡಿರುವುದು’ ಎಂದಿದ್ದಾರೆ.

‘ವಕ್ಫ್ ಆಸ್ತಿಯಲ್ಲಿ ಒಂದಿಂಚನ್ನೂ ಅಕ್ರಮವಾಗಿ ತೆಗೆದುಕೊಂಡಿಲ್ಲ. ಎಲ್ಲವನ್ನೂ ದಾನಿಗಳು ದಾನ ಮಾಡಿರೋದು.  ಸುಮಾರ್ 1 ಲಕ್ಷದ 12 ಸಾವಿರ ದಾನಿಗಳು ದಾನ ಮಾಡಿರೋದು. ಒಂದಿಂಚನ್ನೂ ನಾವು ಅಕ್ರಮವಾಗಿ ತೆಗೆದುಕೊಂಡಿಲ್ಲ’ ಎಂದು ಜಮೀರ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ