ಹಿಂದೂ ಮುಸ್ಲಿಂ ಅನ್ಯೋನ್ಯವಾಗಿರಲಿ ಎಂದು ಕೇಳಿಕೊಂಡೆ: ಜಮೀರ್ ಅಹ್ಮದ್

Krishnaveni K

ಸೋಮವಾರ, 31 ಮಾರ್ಚ್ 2025 (14:49 IST)
ಬೆಂಗಳೂರು: ಇಂದು ಈದ್ ಮಿಲಾದ್ ದಿನ ಹಿಂದೂ ಮತ್ತು ಮುಸ್ಲಿಮರು ಅನ್ಯೋನ್ಯವಾಗಿರಲಿ ಎಂದು ಕೇಳಿಕೊಂಡೆ ಎಂದು ಸಚಿವ ಜಮೀರ್ ಅಹ್ಮದ್ ಹೇಳಿದ್ದಾರೆ.

ಇಂದು ಮುಸ್ಲಿಮರ ಪವಿತ್ರ ರಂಜಾನ್ ಉಪವಾಸ ಅಂತ್ಯವಾಗಿದ್ದು ಈದ್ ಪ್ರಾರ್ಥನೆ ನಡೆಸಿದ್ದಾರೆ. ಸಚಿವ ಜಮೀರ್ ಅಹ್ಮದ್ ಕೂಡಾ ಈದ್ ಪ್ರಾರ್ಥನೆಯಲ್ಲಿ ಭಾಗಿಯಾಗಿದ್ದಾರೆ. ಈ ಬಳಿಕ ಮಾಧ್ಯಮಗಳಿಗೆ ಅವರು ಪ್ರತಿಕ್ರಿಯಿಸಿದ್ದಾರೆ.

‘ಹಿಂದೂ, ಮುಸ್ಲಿಮರು, ಸಿಖ್ಖರು ಅನ್ಯೋನ್ಯವಾಗಿರಲಿ ಎಂದು ಪ್ರಾರ್ಥನೆ ಮಾಡಿದೆ. ರಂಜಾನ್ ನಮಗೆ ದೊಡ್ಡ ಹಬ್ಬ. ಸಿಎಂ ಸಿದ್ದರಾಮಯ್ಯನವರ ಆರೋಗ್ಯ ಸುಧಾರಿಸಲಿ ಎಂದು ಪ್ರಾರ್ಥನೆ ಮಾಡಿದೆ’ ಎಂದು ಅವರು ಹೇಳಿದ್ದಾರೆ.

ಇಂದು ತಮ್ಮ ಪುತ್ರ ಝೈದ್ ಖಾನ್ ರೊಂದಿಗೆ ಜಮೀರ್ ಅಹ್ಮದ್ ಈದ್ ಪ್ರಾರ್ಥನೆಯಲ್ಲಿ ಪಾಲ್ಗೊಂಡರು. ಇತರೆ ಮುಸ್ಲಿಂ  ಬಾಂಧವರೊಂದಿಗೆ ತಾವೂ ವಕ್ಫ್ ಬಿಲ್ ವಿರೋಧಿಸುವ ಸಂಕೇತವಾಗಿ ಕೈಗೆ ಕಪ್ಪು ಪಟ್ಟಿಧರಿಸಿ ಪ್ರಾರ್ಥನೆ ಮಾಡಿದ್ದಾರೆ. ವಕ್ಫ್ ಬಿಲ್ ತರಬಾರದು ಎಂಬುದು ನಮ್ಮ ಬೇಡಿಕೆಯಾಗಿದೆ. ನಮ್ಮ ರಾಜ್ಯ ಸರ್ಕಾರವೂ ಇದನ್ನು ಬೆಂಬಲಿಸುತ್ತಿಲ್ಲ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ