ರಸ್ತೆಯಲ್ಲಿ ನಮಾಜ್ ಮಾಡಿದರೆ ಹುಷಾರ್: ಪಾಸ್ ಪೋರ್ಟ್, ಲೈಸೆನ್ಸ್ ರದ್ದು ಮಾಡುವ ಎಚ್ಚರಿಕೆ

Krishnaveni K

ಶುಕ್ರವಾರ, 28 ಮಾರ್ಚ್ 2025 (10:05 IST)
ಮೀರತ್: ಈದ್ ಮಿಲಾದ್ ಹಬ್ಬದ ಸಂದರ್ಭದಲ್ಲಿ ರಸ್ತೆಯಲ್ಲೇ ನಮಾಜ್ ಮಾಡಿ ಸಾರ್ವಜನಿಕರಿಗೆ ತೊಂದರೆ ಮಾಡಿದರೆ ಹುಷಾರ್. ನಿಮ್ಮ ಪಾಸ್ ಪೋರ್ಟ್, ಲೈಸೆನ್ಸ್ ರದ್ದು ಮಾಡುತ್ತೇವೆ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಈ ರೀತಿ ಎಚ್ಚರಿಕೆ ನೀಡಿರುವುದು ಮೀರತ್ ಪೊಲೀಸರು. ಈದ್ ಮಿಲಾದ್ ಹಬ್ಬ, ರಂಜಾನ್ ಕೊನೆಯ ಶುಕ್ರವಾರವೆಂದು ರಸ್ತೆಯಲ್ಲಿ ನಮಾಜ್ ಮಾಡಿ ಸಾರ್ವಜನಿಕರ ಓಡಾಟಕ್ಕೆ ತೊಂದರೆ ಮಾಡಿದರೆ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ.

ಸ್ಥಳೀಯ ಮಸೀದಿಗಳು, ಈದ್ಗಾಗಳಲ್ಲಿ ಮಾತ್ರವೇ ಈದ್ ಪ್ರಾರ್ಥನೆ ಮಾಡಬೇಕು. ನಿಗದಿಪಡಿಸಿದ ಜಾಗದಲ್ಲಿಯೇ ಪ್ರಾರ್ಥನೆ ಮಾಡಬೇಕು. ಹಬ್ಬದ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣದ ಮೂಲಕ ಅಶಾಂತಿಯನ್ನು ಹರಡಲು ಯತ್ನಿಸಿದರೆ ಅಂತಹವರ ವಿರುದ್ಧವೂ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಮೀರತ್ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಒಂದು ವೇಳೆ ಪಾಸ್ ಪೋರ್ಟ್ ರದ್ದಾದರೆ ಅದನ್ನು ಮರಳಿ ಪಡೆಯಲು ಕಷ್ಟವಾಗುತ್ತದೆ. ನ್ಯಾಯಾಲಯದ ಮೂಲಕ ನಿರಾಪೇಕ್ಷಣಾ ಪತ್ರವಿಲ್ಲದೇ ಮರಳಿ ಪಡೆಯಲು ಸಾಧ್ಯವಾಗದು. ಹೀಗಾಗಿ ನಿಯಮ ಉಲ್ಲಂಘಿಸುವ ಮುನ್ನ ಎಚ್ಚರಿಕೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ