ಟ್ರಾಫಿಕ್ ವ್ಯವಸ್ಥೆ ಕಲ್ಪಿಸಿರಲಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಪಷ್ಟಪಡಿಸಿದ್ರು. ಕಾಂಗ್ರೆಸ್ ಸದಸ್ಯ ಎಂ.ನಾರಾಯಣಸ್ವಾಮಿ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವರು, ಶಾಸಕರಿಗೆ ಹಿಂದೆ ಮುಂದೆ ಸೆಕ್ಯುರಿಟಿ ಜೀಪ್ ಇಲ್ಲ, ಯಾವುದಾದರೂ ಇದ್ದರೂ ತಿಳಿಸಿ ತೆಗೆಸಲಾಗುತ್ತದೆ. ಪೊಲೀಸ್ ಇಲಾಖೆಯಲ್ಲಿ ಝೀರೋ ಟ್ರಾಫಿಕ್ ಇಲ್ಲ, ಗಣ್ಯರ ಪ್ರೋಟೋಕಾಲ್ ಭದ್ರತೆ ಕಾರಣದಂತೆ ವ್ಯವಸ್ಥೆ ಕಲ್ಪಿಸಲಾಗುತ್ತದೆ, ನಾನು ಮತ್ತು ಸಿಎಂ ಝೀರೋ ಟ್ರಾಫಿಕ್ ಪಡೆದಿಲ್ಲ, ಪೊಲೀಸರಿಗೆ ಸಂಚಸರ ನಿರ್ವಹಣೆ ಎಲ್ಲ ಗೊತ್ತು,ಗಣ್ಯರನ್ನು ಸಿಗ್ನಲ್ ಫ್ರೀ ಮಾಡಿ ಕರೆದುಕೊಂಡು ಬರಲಾಗುತ್ತದೆ ಇದಕ್ಕೆ ಝೀರೋ ಟ್ರಾಫಿಕ್ ಅಗತ್ಯವಿಲ್ಲ. ಶಶಿಕಲಾ ಜೊಲ್ಲೆ ಅವರಿಗೆ ರಾಜಭವನದ ಕರೆ ಬಂದಿದೆ, ಅಧಿಕಾರಿಗಳಿಗೆ ಮಾಹಿತಿ ನೀಡಿ ಏನಾದರೂ ಮಾಡಬಹುದಾ ಎನ್ನುವುದು ಕೇಳಿದ್ದಾರೆ ಅವರಿಗೆ ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಿಲ್ಲ, ಆದರೆ ಸಿಗ್ನಲ್ ಫ್ರೀ ಮಾಡಿ ಕರೆದುಕೊಂಡು ಬರಲಾಗಿದೆ. ನಾನು ಮಾಹಿತಿ ಪಡೆದಿದ್ದೇನೆ.ಈ ಪ್ರಕರಣ
ಕೋರ್ಟ್ ನಲ್ಲಿ ಹಾಗಾಗಿ ಹೆಚ್ಚಿನ ಚರ್ಚೆ ಬೇಡ, ತೀರ್ಪು ಬಂದ ನಂತರ ಪ್ರಸ್ತಾಪಿಸುತ್ತೇನೆ ಎಂದರು.
ಈ ವೇಳೆ ನಾರಾಯಣಸ್ವಾಮಿ ಮಾತನಾಡಿ, ನಮ್ಮ ಪಕ್ಷಕ್ಕೆ ದ್ರೋಹವೆಸಗಿ ಕೆಲ ಶಾಸಕರು ರಾಜೀನಾಮೆ ನೀಡಿ ಹೋದಾಗಲೂ ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಲಾಗಿತ್ತು ಎನ್ನುತ್ತಿದ್ದಂತೆ ಕಾನೂನು ಸಚಿವ ಮಾಧುಸ್ವಾಮಿ ಕಿಡಿಕಾರಿದರು. ದ್ರೋಹ ಮಾಡಿ, ವಿಷ ಹಾಕಿ ಹೀಗೆಲ್ಲಾ ಮಾತನಾಡಬಾರದು, ಯಾರೇನು ಬರೆದುಕೊಟ್ಟಿರಲ್ಲ ಎಂದರು.ನಿಮ್ಮ ಪಕ್ಷದಲ್ಲೂ ಬೇಕಾದಷ್ಟು ಜನ ದ್ರೋಹ ಮಾಡಿದ್ದಾರೆ ಬಿಡಿ ಎಂದು ಕಾಲೆಳೆದರು.ಬಿಜೆಪಿ ಸದಸ್ಯರು ಸಚಿವರ ನೆರವಿಗೆ ಧಾವಿಸಿ ಕಾಂಗ್ರೆಸ್ ವಿರುದ್ಧ ಮುಗಿಬಿದ್ದರು. ದ್ರೋಹ ಪದವನ್ನು ಕಡತದಿಂದ ತೆಗೆಯುಂತೆ ಆಗ್ರಹಿಸಿದರು.